ಆತ್ಮ ಸಾಕ್ಷಾತ್ಕಾರ
ಪ್ರಾಪ್ತಿಗಾಗಿ ಸರಳ ಮತ್ತು ನಿಖರ ವಿಜ್ಞಾನ
ಈ ಪ್ರಪಂಚದ ಕಾನೂನನ್ನು ಒಂದೇ ವಾಕ್ಯದಲ್ಲಿ ಅರ್ಥಮಾಡಿಕೊಳ್ಳಿ. ಈ ಜಗತ್ತಿನ ಎಲ್ಲಾ ಧರ್ಮಗಳ ಸಾರವೇ ಇದಾಗಿದೆ. ‘ಮನುಷ್ಯ, ತಾನು ಸುಖವನ್ನು ಬಯಸುವುದಾದರೆ ಬೇರೆ ಜೀವಿಗಳಿಗೂ ಸುಖವನ್ನು ನೀಡಬೇಕು. ದುಃಖವನ್ನು ಬಯಸುವುದಾದರೆ ದುಃಖವನ್ನು ನೀಡಬೇಕು.’ ಯಾವುದು ಅನುಕೂಲವೋ ಅದನ್ನು ನೀಡಿ. ಈ ವಿಷಯವಾಗಿ ಯಾರಾದರೂ ನಮ್ಮ ಹತ್ತಿರ ಹಣವೇ ಇಲ್ಲ. ನಾವು ಜನರಿಗೆ ಹೇಗೆ ಸುಖ ನೀಡುವುದು ಎಂದು ಕೇಳಿದರೆ, ಹಣದಿಂದಲೇ ಸುಖ ನೀಡಬಹುದು ಎಂದೇನೂ ಇಲ್ಲ.
ಇಡೀ ಜೀವನವೇ ಫ್ರ್ಯಾಕ್ಚರ್ ಆದಂತಿದೆ. ಏಕೆ ಬದುಕುತ್ತಿದ್ದೇವೆ ಎಂಬುದರ ಪರಿವೆಯೂ ಇಲ್ಲವಾಗಿದೆ. ಇಂತಹ ಗುರಿಯೇ ಇಲ್ಲದ ಜೀವನ ಅರ್ಥಹೀನ. ಲಕ್ಷ್ಮಿ ಬಂದಾಗ ತಿಂದು- ಕುಡಿದು ಮಜಾ ಮಾಡಿ, ನಂತರ ಇಡೀ ದಿನ ಚಿಂತೆಯಲ್ಲಿ ಕಳೆಯುತ್ತೇವೆ. ಇದು ಜೀವನದ ಗುರಿಯಾಗಲು ಹೇಗೆ ತಾನೆ ಸಾಧ್ಯ? ಮಾನವ ಜನ್ಮವನ್ನು ಸುಮ್ಮನೆ ವ್ಯರ್ಥ ಮಾಡುವುದರ ಅರ್ಥವಾದರೂ ಏನು? ಹಾಗಿದ್ದರೆ ಮಾನವನ ಜನ್ಮ ಪಡೆದ ನಂತರ ತನ್ನ ಗುರಿಯನ್ನು ತಲುಪಲು ಏನು ಮಾಡಬೇಕು? ಸಂಸಾರದ ಸುಖ, ಅಂದರೆ ಭೌತಿಕವಾದ ಸುಖವನ್ನು ಬಯಸುತ್ತೀರಾದರೆ ನಿಮ್ಮ ಹತ್ತಿರ ಏನಿದೆಯೋ ಅವೆಲ್ಲವನ್ನೂ ಜನರೊಂದಿಗೆ ಹಂಚಿಕೊಳ್ಳಿ.
Reviews
There are no reviews yet.