ಮಕ್ಕಳನ್ನು ಬೆಳೆಸುವುದು ಇಷ್ಟೊಂದು ಕಷ್ಟವೇ ಎಂದು ಗಾಬರಿಯಾಗಬೇಡಿ. ಅದು ಕಷ್ಟವೂ ಹೌದು, ಸವಾಲೂ ಹೌದು. ಆದರೆ ಅದಕ್ಕೆ ತುಂಬಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಲ್ಲಿ ಹೇಳಿರುವುದನ್ನೆಲ್ಲಾ ನೀವೂ ಮಾಡಬೇಕೆಂದೇನೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿ. ಹೀಗೇ ಮಾಡಬೇಕೆಂದೂ ಇಲ್ಲ. ಇದೊಂದು ಕೇವಲ ಕೈಮರ. ವೈವಿಧ್ಯಮಯ ದಾರಿಯನ್ನು ನೀವೇ ಕಂಡುಕೊಳ್ಳಬಹುದು.
ಇಲ್ಲಿ ವಿವರಿಸಲಾಗಿರುವ ಚಟುವಟಿಕೆಗಳು, ಸಂಗತಿಗಳು, ವಿಚಾರಗಳು ಯಾವುದರಲ್ಲೂ ಏನಂಥ ವಿಶೇಷವಿಲ್ಲ. ಇಲ್ಲಿ ವಿವರಿಸಿರುವುದೆಲ್ಲಾ ಸಣ್ಣಪುಟ್ಟ ಸಂಗತಿಗಳೇ; ಚಿಕ್ಕಪುಟ್ಟ ಚಟುವಟಿಕೆಗಳೇ. ದಿನನಿತ್ಯ ನಮಗೆ ಎದುರಾಗುವ ಸಂದರ್ಭಗಳೇ. ಎಲ್ಲರೂ ಮಾಡಬಹು ದಾದಂಥ ಕೆಲಸಗಳೇ. ಮಾಡಬೇಕಷ್ಟೆ. ಮನಸ್ಸಿದ್ದರೆ ಯಾರು ಬೇಕಾದರೂ ಮಾಡಬಹುದು. ಇಲ್ಲಿರುವ ಎಲ್ಲವನ್ನೂ ನಾನು ಮತ್ತು ನನ್ನ ಮೊಮ್ಮಗ ಜೊತೆಗೂಡಿ ಮಾಡಿದ್ದೇವೆ. ಮಾಡದಿರುವುದೇನನ್ನೂ ಕಲ್ಪಿಸಿಕೊಂಡು ಬರೆದಿಲ್ಲ ಎಂಬುದೇ ಈ ಬರಹಗಳ ತಾಕತ್ತು.
ಈ ಚಟುವಟಿಕೆಗಳನ್ನು ಕೇವಲ ಅಜ್ಜಂದಿರು ಮಾತ್ರ ಮಾಡಬೇಕೆಂದೇನಿಲ್ಲ. ಮಗುವಿನ ಬೆಳವಣಿಗೆಯ ಬಗ್ಗೆ ಕಾಳಜಿಯುಳ್ಳ ಮತ್ತು ಮಗುವಿನ ಪ್ರೀತಿ ಗಳಿಸಿದ ಅಪ್ಪ-ಅಮ್ಮ, ಅಣ್ಣ-ಅಕ್ಕ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಯಾರಾದರೂ ಮಾಡಿಸಬಹುದು.
ಪ್ರಯತ್ನಿಸಿ ನೋಡಿ.
Reviews
There are no reviews yet.