• -40%

    ಕೈಲಾಸ-ಮಾನಸ

    0

    ಕೈಲಾಸ-ಮಾನಸ ಸರೋವರಗಳ ಯಾತ್ರೆ ಅದೊಂದು ಯಾತ್ರೆಗಳ ಯಾತ್ರೆ. ಅಗತ್ಯ ಮಾನಸಿಕ ಮತ್ತು ದೈಹಿಕ ದಾರ್ಢ್ಯತೆ ಇದ್ದರೆ ಮಾತ್ರ ಈ ಯಾತ್ರೆ ಪೂರೈಸಬಹುದು. ಭಾರತೀಯರ ಅದರಲ್ಲೂ ಹಿಂದೂ ಧರ್ಮಾನುಯಾಯಿಗಳ ಪಾಲಿಗೆ ಶಿವ ಆರಾಧ್ಯ ದೈವ. ದೇವಾನುದೇವತಗಳಲ್ಲಿ ಅಗಗ್ರಣ್ಯ. ಶಿವನ ಆವಾಸ ಸ್ಥಾನ ಕೈಲಾಸ ಪರ್ವತವೆಂದೂ, ವಿಷ್ಣುವಿನ ವಾಸಸ್ಥಾನ ಮಾನಸ ಸರೋವರವೆಂದೂ ಎಲ್ಲ ಭಾವುಕ ಭಕ್ತರ ತಲೆ ತಲಾಂತರದ ನಂಬಿಕೆ. ಪುರಾಣ, ಪುಣ್ಯಕತೆಗಳ ಪ್ರಕಾರ ಹಿಮಾಲಯ ಮತ್ತು ಕೈಲಾಸ ಪರಿಸರದ ಲೋಕ ದೇವಲೋಕ. ಜನಮಾನಸದಲ್ಲಿ ಈ ನಂಬಿಕೆ ಬೇರೂರಿನಿಂತಿದೆ. ಕೈಲಾಸ ಪರ್ವತ ಅದೊಂದು ಅಳಿವಿಲ್ಲದ ನೈಸರ್ಗಿಕ ಸ್ಥಾವರ. ಮಾನಸ ಸರೋವರ, ಕಿನ್ನರ ಲೋಕದ ಬತ್ತದ ಆಗರ. ಅವುಗಳ ಯಾತ್ರೆ ಆಸ್ತಿಕರ ಜೀವಮಾನದ ಆಶೆ.

    ಕೈಲಾಸಮಾನಸದೊಂದಿಗೆ ಹಿಮಾಲಯ, ಟಿಬೆಟ್, ನೇಪಾಳ ಕುರಿತು ಹಲವಾರು ವಿಷಯಗಳನ್ನು ಪ್ರವಾಸದ ವೇಳೆ ಅರಿಯಲು ಸಾಧ್ಯವಾಯಿತು. ಆದ್ದರಿಂದ ಹಿಮಾಲಯದ ವಿಭಿನ್ನ ಪ್ರಾಕೃತಿಕ ವೈಚಿತ್ರ್ಯಗಳ ಬಗ್ಗೆ, ಪರಿಸರದ ಬಗ್ಗೆ ಕೆಲವು ಅಂಶಗಳು ಈ ಕಥನದಲ್ಲಿ ಸೇರಿಕೊಂಡಿವೆ.

    Original price was: $1.50.Current price is: $0.90.
    Add to basket
  • -52%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: $2.04.Current price is: $0.98.
    Add to basket
  • -40%

    ಕೊರವಂಜಿಯ ಪಡುವಣ ಯಾತ್ರೆ

    0

    ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು  ಹೊಮ್ಮಿಸುವ ಅವಕಾಶವನ್ನು  ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ  ‘ಕೊರವಂಜಿಯ ಪಡುವಣ ಯಾತ್ರೆ’.

    Original price was: $1.02.Current price is: $0.61.
    Add to basket