- -40%
ಸುಖ ಯಾರ ಸೊತ್ತು?
0Original price was: ₹100.00.₹60.00Current price is: ₹60.00.ಸುಖ ಯಾರ ಸೊತ್ತು?
(ವ್ಯಕ್ತಿತ್ವ ವಿಕಸನ)
ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್!