• -40%

    BAMONN – Story of a Konkani Roman Catholic

    0

    Story of a Konkani Roman Catholic.

    Original price was: $3.06.Current price is: $1.84.
    Add to basket
  • -40%

    ದಿಬ್ಬಣ

    0

    ದಿಬ್ಬಣ

    ಈ ಪುಸ್ತಕವು ಪ್ರಭಾಕರ ನೀರ್ ಮಾರ್ಗ ಅವರು ಬರೆದ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.68.Current price is: $1.01.
    Add to basket
  • -40%

    ತಿಲ್ಲಾನ

    0

    ತಿಲ್ಲಾನ

    ‘ತಿಲ್ಲಾನ’ ಕಾದಂಬರಿ ಜಿಲ್ಲೆಯಲ್ಲಿ ಭೂತಾರಾಧನೆಯನ್ನು ನಂಬಿಕೊಂಡು ಬಂದಿರುವ ಕಲಾವಿದನೊಬ್ಬನ ನೋವಿನ ಕತೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಉಲ್ಲಂಘನೆ

    0

    ಉಲ್ಲಂಘನೆ

    ನಾ. ಮೊಗಸಾಲೆಯವರ ಕಾದಂಬರಿ ‘ಉಲ್ಲಂಘನೆ’ಯು ಪ್ರಾದೇಶಿಕ ಕಾದಂಬರಿಯಾಗಿರುವುದರ ಜೊತೆಗೆ ಒಂದು ಸಮುದಾಯದ ಏಳು-ಬೀಳುಗಳನ್ನು ಕುರಿತು ಬರೆದ ಕೃತಿಯಾಗಿದೆ.

    Original price was: $4.80.Current price is: $2.88.
    Add to basket
  • -40%

    ಕಾಡಿನ ದಾರಿ

    0

    ಕಾಡಿನ ದಾರಿ

    ಶ್ರೀ ಜಿ. ಪಿ. ಬಸವರಾಜು ಅವರ  ಕಾದಂಬರಿ.

    Original price was: $1.32.Current price is: $0.79.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ ೩ 

    0

    ಮೊಗಸಾಲೆ ಕಾದಂಬರಿ ಸಂಪುಟ ೩ 

    ಈ ಸಂಪುಟದ ಮೊದಲ ಕಾದಂಬರಿ ‘ಪ್ರಕೃತಿ’ (ಪ್ರ.ಮು.೧೯೮೨) ಕಾರವಾರ ಮತ್ತು ಕಾರ್ಕಳ ಪರಿಸರದಲ್ಲಿ ಇದರ ಘಟನಾವಳಿಗಳು ನಡೆಯುತ್ತವೆ. ಈ ಸಂಪುಟದ ಎರಡನೇ ಕಾದಂಬರಿ – ‘ನೆಲಮುಗಿಲುಗಳ ನಡುವೆ’. ಈ ಕಾದಂಬರಿಯು ಹಿಂದೆ ಆಗಿದ್ದನ್ನೂ ನೆನೆಸಿಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಉದ್ದೇಶ- ಬದುಕು ಅನಿರೀಕ್ಷಿತವಾಗಿ ಸಾವಿಗೆ, ಹಾಗೂ ಮನಸ್ಸು ಸಾವಿನತ್ತಣಿಂದ ಬದುಕಿಗೆ ತಿರುಗಿಕೊಳ್ಳುವುದು.

    ಸಣ್ಣ ವಿಷಯವನ್ನು ದೊಡ್ಡದಾಗಿಸುವುದು- ಎಂಬರ್ಥದಲ್ಲಿ ಈ ಮಾತನ್ನು ನಾವು ಆಡುತ್ತೇವೆ. ಆದರೆ ಇದನ್ನೇ ಸಾಧಿಸಿ ತೋರಿಸಬಲ್ಲ ವಿವಿಧಾರ್ಥಗಳ ‘ಪ್ರತಿಭಾವಂತ’ರು ನಮ್ಮ ಸಮಾಜದಲ್ಲಿದ್ದಾರೆ. ಅವರು ಹೇಗೆ ಏನೂ ಇಲ್ಲದಲ್ಲಿಯೂ ಏನೆಲ್ಲ ರಾದ್ಧಾಂತ ಸೃಷ್ಟಿಸುತ್ತಾರೆ ಎಂಬುದೊಂದು ವಿಸ್ಮಯ! ಮತ್ತು ಅಂಥ ವಿಸ್ಮಯವನ್ನು, ಸಣ್ಣ ಸಣ್ಣ ವಿವರಗಳು/ಮಾತುಕತೆಗಳಲ್ಲಿ ಮುಂದುವರೆಯುವ ಕುಟಿಲೋಪಾಯಗಳನ್ನು ಕಥಾನಕವಾಗಿ ಸೃಷ್ಟಿಸುವುದು ಮೂರನೇ ಕಾದಂರಿಯಾದ ದಿಗಂತ.

    ‘ದೃಷ್ಟಿ’ ಈ ಸಂಪುಟದ ಕೊನೆಯ ಕಾದಂಬರಿ. ಈ ಪುಟ್ಟ ಕಾದಂಬರಿ ತನ್ನ ತೆಕ್ಕೆಯಲ್ಲಿ ಹಿಡಿಯಬಯಸುವ ಬದುಕು ಹಾಗೂ ಬದುಕನ್ನು ಕುರಿತ ಚಿಂತನಾತ್ಮಕ ಶೋಧ ಹೆಚ್ಚು ಗಂಭೀರವಾಗಿ ನಡೆದಿದೆ.

    Original price was: $2.70.Current price is: $1.62.
    Add to basket
  • -40%

    Anurakte – The Enamoured

    0

    Translated from Kannada by Poornima Hebbar

    It is originally a Kannada novel written by Vyasaraya Ballal and translated to English by Poornima Hebbar.

    Original price was: $4.68.Current price is: $2.81.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ ೪

    0

    ಮೊಗಸಾಲೆ ಕಾದಂಬರಿ ಸಂಪುಟ ೪

    ಇದು ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ನಾಲ್ಕನೇ ಸಂಪುಟ. ಇದರಲ್ಲಿ ನಾಲ್ಕು ಕಾದಂಬರಿಗಳಿವೆ. ಉಪ್ಪು, ತೊಟ್ಟಿ, ಪಂಥ ಮತ್ತು ಅರ್ಥ – ಇಲ್ಲಿರುವ ಕಾದಂಬರಿಗಳು. 

    ಈ ಕಾದಂಬರಿಗಳಲ್ಲಿನ ಜೀವನ ಚಿತ್ರಣವೂ ಇಂಥ ಹಲವೆಂಟು ಬಗೆಯ ವ್ಯಕ್ತಿತ್ವಗಳನ್ನು ತೆರೆದಿಡುವಂಥದ್ದು. ‘ಉಪ್ಪು’ ಕಾದಂಬರಿ ಪ್ರಾಮಾಣಿಕ ರಾಜಕಾರಣಿಯೊಬ್ಬ ಭ್ರಮನಿರಸನಗೊಳ್ಳುವುದನ್ನು ಚಿತ್ರಿಸಿದರೆ, ‘ತೊಟ್ಟಿ’ ಒಂದು ಕಾಲ್ಪನಿಕ ಘಟನೆಯ ಮೂಲಕ ಒಂದು ಬೀದಿಯ ಜನ ಒಂದು ಸನ್ನಿವೇಶಕ್ಕೆ ಹೇಗೆ ಸ್ಪಂದಿಸುತ್ತಾರೆಂಬುದನ್ನು, ಅನಂತರ ಅವರೇ ಹೇಗೆ ಬದಲಾಗುತ್ತಾರೆಂಬುದನ್ನು ಚಿತ್ರಿಸುತ್ತದೆ. ‘ಪಂಥ’ ಬಡವರ ಅಮಾಯಕತೆಯನ್ನು ಧಾರ್ಮಿಕ ನೆಲೆಯಲ್ಲಿ ಶೋಷಿಸುವ, ಅದನ್ನು ಮಾನವೀಯ ನೆಲೆಯಲ್ಲಿ ನೋಡುವ ಬದಲು ಕೋಮುದೃಷ್ಟಿಯಿಂದ ನೋಡುವುದರ ಪರಿಣಾಮವನ್ನು ಚಿತ್ರಿಸುತ್ತದೆ. ಕೊನೆಯದಾದ ‘ಅರ್ಥ’ ಹೊಸ ತಲೆಮಾರು ತನ್ನ ಬೇರಿನಿಂದ ಕಳಚಿಕೊಳ್ಳುವುದನ್ನು ಹಿರಿಯ ತಲೆಗಳು ವಿಷಾದದಿಂದ ಗಮನಿಸುತ್ತಾ ಸಂಕಟಪಡುವುದನ್ನು ಅಭಿವ್ಯಕ್ತಿಸುತ್ತದೆ.

    Original price was: $2.70.Current price is: $1.62.
    Add to basket
  • -40%

    ವೇಷ

    0

    ವೇಷ
    (ಸಾಮಾಜಿಕ ಕಾದಂಬರಿ)
    ಪ್ರಭಾಕರ ನೀರ್ ಮಾರ್ಗ

    ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

    Original price was: $1.56.Current price is: $0.94.
    Add to basket
  • -50%

    ಹವನ

    0

    ಹವನ
    ಕಾದಂಬರಿ
    ಮಲ್ಲಿಕಾರ್ಜುನ ಹಿರೇಮಠ

    ‘ಹವನ’ ವಿಶಿಷ್ಟ ಸಾಂಸ್ಕೃತಿಕ ಆವರಣ ಹೊಂದಿದ ಕಾದಂಬರಿ, ಮಾನವಶಾಸ್ತ್ರೀಯ (Anthropological) ಅಧ್ಯಯನದ ಆಸಕ್ತಿಗಳು, ಮತ್ತು ಆಧುನಿಕತೆಗೆ ಸಂಬಂಧಪಟ್ಟಂತೆ ಇಂದು ಪ್ರಚಲಿತವಿರುವ ವೈಚಾರಿಕತೆಯ ಸಂರಚನೆಗಳು, ಇವೆರಡಕ್ಕೂ ಸೃಜನಶೀಲವಾಗಿ ಮುಖಾಮುಖಿಗೊಳ್ಳುವ ‘ಹವನ’ ಕಾದಂಬರಿಯಲ್ಲಿ, ನಮ್ಮ ನಡುವಿನ ಲಂಬಾಣಿ ಸಮೂಹದ ವರ್ಣಮಯ ಸಾಂಸ್ಕೃತಿಕ ನಡುಗಡ್ಡೆಯೊಂದು ಸ್ಫೋಟಗೊಳ್ಳುವ ಅಧಿಕೃತ ಚಿತ್ರಣವಿದೆ.

    Original price was: $1.44.Current price is: $0.72.
    Add to basket
  • -40%

    ಮೊಗಸಾಲೆ ಕಾದಂಬರಿ  ಸಂಪುಟ – ೨

    0

    ಮೊಗಸಾಲೆ ಕಾದಂಬರಿ  ಸಂಪುಟ – ೨
    ಡಾ. ನಾ. ಮೊಗಸಾಲೆ

    ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ಈ ಎರಡನೇ ಸಂಪುಟದಲ್ಲಿ ಇರುವ ಮೂರು ಕಾದಂಬರಿಗಳು – ‘ನನ್ನದಲ್ಲದ್ದು’ (೧೯೭೭), ‘ಪಲ್ಲಟ’ (೧೯೭೯) ಹಾಗೂ ‘ಹದ್ದು’ (೧೯೭೨).

    ಈ ಸಂಪುಟದಲ್ಲಿನ ಕಾದಂಬರಿಗಳ ಪೈಕಿ ‘ನನ್ನದಲ್ಲದ್ದು’ ಲೇಖಕರಿಗೆ ಹೆಚ್ಚು ಪ್ರಚಾರವನ್ನು ತಂದುಕೊಟ್ಟ ಕಾದಂಬರಿ. ಮೇಧಾವಿ ವೈದ್ಯನೊಬ್ಬ ತನ್ನ ತಂದೆ ಮಧುಮೇಹದಿಂದ ನರಳಿ ನರಳಿ ಸತ್ತದ್ದನ್ನು ನೋಡಿ, ತನ್ನ ಮಕ್ಕಳಿಗೂ ಅದೇ ರೋಗ ಬರುವುದೆಂಬ ಕಾರಣದಿಂದ ಮದುವೆಗೂ ಮೊದಲೇ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಅದನ್ನು ಮುಚ್ಚಿಟ್ಟು ಮದುವೆಯಾಗುವುದು, ಮದುವೆಯಾದ ನಾಲ್ಕೈದು ವರ್ಷಗಳ ನಂತರ ಅದನ್ನು ಪತ್ನಿಗೆ ಹೇಳಿ ಇನ್ನೊಬ್ಬರ ವೀರ್ಯದಿಂದ ಗರ್ಭಿಣಿಯಾಗುವಂತೆ ಸಲಹೆ ಕೊಡುವುದು, ಆಕೆ ತೀವ್ರ ಘಾಸಿಗೊಳ್ಳುವುದು – ಇಲ್ಲಿನ ವಸ್ತು. ಮದುವೆಗೆ ಮೊದಲು ಮತ್ತೂ ನಂತರ ಆ ವೈದ್ಯ ಡಾ. ಶ್ರೀನಿವಾಸ್ ಹಲವಾರು ಹೆಣ್ಣುಗಳನ್ನು ಅನುಭವಿಸಿ ‘ಎಲ್ಲರಲ್ಲೂ ಇರುವುದು ಅದೇ’ ಎಂಬ ನಿಲುವಿಗೆ ಬಂದಿರುತ್ತಾನೆ. ತನ್ನ ಆಸ್ತಿಯನ್ನೆಲ್ಲಾ ಪತ್ನಿಯ ಹೆಸರಿಗೆ ಬರೆದು, ಆಕೆಗೆ ಮರುಮದುವೆಯಾಗುವಂತೆ ಸಲಹೆ ನೀಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
    ‘ಪಲ್ಲಟ’ದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾಗುವಾಗ ಕುಟುಂಬಗಳ ಒಳಗಿನ ಬಿರುಕಿಗೆ ಹೇಗೆ ಕಾರಣವಾಯಿತೆಂಬುದನ್ನು ಚಿತ್ರಿಸುತ್ತದೆ.

    ‘ಹದ್ದು’ ಕೃತಿಯಲ್ಲಿ ಪ್ರಾಯದಲ್ಲಿ ಉದಿಸುವ ಕಾಮದ ಅಭೀಷ್ಟೇ ವ್ಯಕ್ತಿಗಳು ಹದ್ದುವಾಗುವಂತೆ ಮಾಡುವುದನ್ನು ಚಿತ್ರಿಸುತ್ತದೆ.

    Original price was: $2.70.Current price is: $1.62.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ – ೧

    0

    ಮೊಗಸಾಲೆ ಕಾದಂಬರಿ ಸಂಪುಟ – ೧

    ಡಾ. ನಾ. ಮೊಗಸಾಲೆ

    ‘ಮೊಗಸಾಲೆ ಕಾದಂಬರಿ ಸಂಪುಟ – ೧’ : ಎನಿಸಿಕೊಂಡಿರುವ ಈ ಪ್ರಥಮ ಸಂಪುಟದಲ್ಲಿ ಅವರ ಆರಂಭದ ಮೂರು ಕಾದಂಬರಿಗಳಿವೆ. ಈ ಮೂರು ಕಾದಂಬರಿಗಳೂ ಅವರು ಹದಿನೆಂಟರಿಂದ ಇಪ್ಪತ್ತೊಂದರ ಒಳಗಿನ ವಯಸ್ಸಿನ ‘ಹುಡುಗ’ರಾಗಿದ್ದಾಗ ಬರೆದದ್ದು.

    ಅವರ ಮೊದಲ ಕಾದಂಬರಿ ‘ಮಣ್ಣಿನ ಮಕ್ಕಳು’. ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಒಂದು ಶೂದ್ರ ಕುಟುಂಬ, ಮನೆಯ ಹಿರಿಮಗನ ಅವಿವೇಕದಿಂದಾಗಿ ಎಲ್ಲವನ್ನೂ ಕಳೆದುಕೊಂಡದ್ದನ್ನು ಚಿತ್ರಿಸುತ್ತದೆ.

    ಅನಂತ – ಡಾ. ಮೊಗಸಾಲೆಯವರು ಬರೆದ ಎರಡನೆಯ ಕಾದಂಬರಿ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ದ.ಕನ್ನಡದ ಹವ್ಯಕ ಬ್ರಾಹ್ಮಣ ಸಮಾಜದಲ್ಲಿ ಪ್ರಚಲಿತ ರೂಢಿಗೆ ವಿರುದ್ಧವಾಗಿ ತನ್ನ ಅಕ್ಕನ ಮಗಳನ್ನು ಮದುವೆಯಾಗಲು ಬಯಸಿ ವಿಫಲನಾಗುವ ಕತೆಯಿದು.

    ಮೂರನೆಯ ಕಾದಂಬರಿ ‘ಕನಸಿನ ಬಳ್ಳಿ’. ಇಲ್ಲಿನ ಕಥಾನಾಯಕ ಸದಾನಂದ ಕೂಡ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಮಾಡುತ್ತಿದ್ದವನು. ಇವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದ ವಾಸಂತಿಯನ್ನು (ಆಕೆ ಎಳೆ ವಯಸ್ಸಿನ ವಿಧವೆ) ಮದುವೆಯಾಗಲು ಬಯಸಿ ತಾಯಿಯ ಒಪ್ಪಿಗೆ ಸಿಗದ ಕಾರಣಕ್ಕಾಗಿ ಬೇಸರಗೊಂಡು ನೌಕರಿ ಬಿಟ್ಟು ತನ್ನ ಪೂರ್ವಿಕರ ಹಳ್ಳಿಯಾದ ಕಾಸರಗೋಡು ಸಮೀಪದ ಕನ್ಯಾನಕ್ಕೆ ಬಂದು ಖಾಸಗಿ ಕ್ಲಿನಿಕ್ ಆರಂಭಿಸಿ ಅಲ್ಲಿಯೇ ಇರತೊಡಗುತ್ತಾನೆ. ತನ್ನ ತಂದೆ ನಿರ್ಲಕ್ಷಿಸಿ ಹೋಗಿದ್ದ ಕೃಷಿ ಜಮೀನನ್ನೂ ಅಭಿವೃದ್ಧಿಪಡಿಸುತ್ತಾ ಅದನ್ನು ಒಳ್ಳೆಯ ತೋಟವಾಗಿಸುತ್ತಾನೆ.

    Original price was: $2.70.Current price is: $1.62.
    Add to basket