- -40%
ರೆಕ್ಕೆ ಕಟ್ಟುವಿರಾ
0Original price was: ₹70.00.₹42.00Current price is: ₹42.00.ರೆಕ್ಕೆ ಕಟ್ಟುವಿರಾ:
೧೯೪೫ ರಲ್ಲಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾ ಮೊದಲಬಾರಿಗೆ ಅಣುಬಾಂಬನ್ನು ಜಪಾನಿನ ಮೇಲೆ ಎಸೆಯಿತು. ಹಿರೋಷಿಮಾ, ನಾಗಾಸಾಕಿ ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನತೀರಿಕೊಂಡರು. ಲಕ್ಷಾಂತರ ಜನ ಅಂಕವಿಕಲರಾದರು. ಜೀವ ಉಳಿಸಿಕೊಂಡ ಒಬ್ಬೊಬ್ಬರ ಬದುಕೂ ದಾರುಣವಾಯಿತು. ಅದಾಗಿ ಮೂರು ತಲೆಮಾರುಗಳು ದಾಟಿದರೂ ಹುಟ್ಟುವ ಮಕ್ಕಳ ಕೈಕಾಲುಗಳು ಊನವಾಗಿವೆ. ಅಣುಬಾಂಬ್ ಎಂತಹ ವಿನಾಶಕಾರಿ ಎಂಬುದಕ್ಕೆ ಇಡೀ ಸಮುದಾಯ ಸಾಕ್ಷಿಯಾಗಿ ನಿಂತಿದೆ.
ಇಂತಹ ಸಮುದಾಯದ ನಡುವೆ ಪುಟ್ಟ ಸಂಸಾರ, ಸುಂದರ ಬದುಕು ಎಂದು ಕನಸು ಕಟ್ಟಿಕೊಂಡು ಬದುಕುತ್ತಿದ್ದ “ಕಿನ್ಲು” ಎಂಬ ಮಹಿಳೆ ಬಾಂಬಿನ ಅನುಭವವನ್ನು, ಅದು ತನ್ನ ಕನಸುಗಳನ್ನು ನುಚ್ಚುನೂರು ಮಾಡಿದ್ದನ್ನು ಕುರಿತು ೨೫ ವರ್ಷಗಳಾದ ನಂತರ ಹೇಳಿಕೊಂಡ ವಿವರಗಳು ಈ ನಾಟಕಕ್ಕೆ ಕಾರಣವಾಗಿದೆ.