- -40%
ದಿನಚರಿಯ ಕಡೇ ಪುಟದಿಂದ…
0ದಿನಚರಿಯ ಕಡೇ ಪುಟದಿಂದ…
ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.₹110.00Original price was: ₹110.00.₹66.00Current price is: ₹66.00.