- -40%
ಹುಡುಗಾಟ- ಹುಡುಕಾಟ
0Original price was: ₹130.00.₹78.00Current price is: ₹78.00.ಹುಡುಗಾಟ- ಹುಡುಕಾಟ
‘ತರಂಗ’ ವಾರಪತ್ರಿಕೆ ಧಾರವಾಹಿ
(ಹದಿಹರೆಯದವರಿಗಾಗಿ )ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ. ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ. ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ. ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ. ಪಶ್ಚಿಮಘಟ್ಟದ ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ. ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ. ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ. ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ. ಪಶ್ಚಿಮಘಟ್ಟದ ಅರಣ್ಯ ಈಗಲೂ ನಿಗೂಢವೇ. ದಾರಿ ತಿಳಿದವರೂ ಅದರೊಳಗೆ ಸುತ್ತಿ ಬೆವರುವುದುಂಟು. ದಾರಿ ತಿಳಿಯದ ಚಾರಣಿಗರೇ ಮಳೆಗಾಲದಲ್ಲಿ ದಿಕ್ಕು-ದೆಸೆ ತಿಳಿಯದೆ ಬದುಕು ಕಳೆದುಕೊಂಡಿರುವುದೂ ಉಂಟು. ಅರಣ್ಯವೆಂದರೇನೆಂದೇ ತಿಳಿಯದ ಮೂವರು ಉತ್ಸಾಹಿ ಹದಿಹರೆಯದವರು ಅಕಸ್ಮಾತ್ತಾಗಿ ಇಂತಹಾ ದಟ್ಟವಾದ ಅರಣ್ಯದೊಳಗೆ ಸಿಕ್ಕಿ ಹಾಕಿಕೊಂಡು ಬದುಕಿಗಾಗಿ ಹೋರಾಡುವುದನ್ನು ವಿವರಿಸುವುದೇ ಹುಡುಗಾಟವಾಡಲು ಹೋಗಿ ಹುಡುಕಾಟಕ್ಕೆ ದಾರಿಯಾದ ಈ ಹದಿಹರೆಯದವರ ಕಾದಂಬರಿ. ಆ ಪ್ರಾಯದವರ ಮನೋಭಾವ ಹೇಗಿರುತ್ತದೆ? ಅದರೊಂದು ಚಿತ್ರಣ ನೀಡುವ ಯತ್ನವೂ ಇಲ್ಲಿದೆ. ‘ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವುದು ಹೇಗೆ?’ ಎಂಬ ಚಿಂತನೆ ಹೇಗೆ ಕಷ್ಟವನ್ನು ಕೊನೆಗೂ ದೂರ ಮಾಡುತ್ತದೆ ಎನ್ನುವುದನ್ನು ಹದಿಹರೆಯದವರ ಜೊತೆಗೆ ದೊಡ್ಡವರೂ ಓದಬಹುದು.