- -40%
ಗದುಗಿನ ನಾರಾಯಣರಾವ ಹುಯಿಲಗೋಳ
0Original price was: ₹25.00.₹15.00Current price is: ₹15.00.ಗದುಗಿನ ಹುಯಿಲಗೋಳ ನಾರಾಯಣರಾವ
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.