• -40%

    ಝೆನ್ ಹಾಯಿಕು

    0

    ಝೆನ್ ಹಾಯಿಕು
    ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
    -ಜಿ. ಆರ್. ಪರಿಮಳಾ ರಾವ್

    Original price was: ₹50.00.Current price is: ₹30.00.
    Add to basket
  • -40%

    ಮುತ್ತಿನ ಮಳೆ

    0

    ಮುತ್ತಿನ ಮಳೆ
    ಹನಿಗವನಗಳು
    ಶ್ರೀಮತಿ ಜಿ. ಆರ್.ಪರಿಮಳಾರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಇವರ ಸಾಮಾಜಿ ಕಾಳಜಿ ತಮ್ಮ ಕವಿತೆಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂದಿನ ಸಾಮಾಜಿಕ ಬದುಕಿಗೆ ಇದು ತೀರಾ ಪ್ರಸ್ತುತವೂ ಆಗಿದೆ.
    ಬಹಿರಂಗದ ವಾಸ್ತವದ ಮಜಲಿನಿಂದ ಅಂತರಂಗದ ಆತ್ಮ ಶೋಧದ ಪ್ರಪಂಚಕ್ಕೆ ಕಾಲಿಡುತ್ತಿರುವ ಇವರ ಕಾವ್ಯ ಪ್ರಕೃತಿಯ ಮೋಡಿಯಲ್ಲಿ ಸಿಲುಕಿ ಕಲ್ಪನೆಯ ವರ್ಣಮಯ ಲೋಕದಲ್ಲಿ ವಿಹರಿಸಿ ಕೊನೆಗೆ ಒಳ ಹುಡುಕಾಟದ ಭಾರತೀಯ ಸಂಸ್ಕಾರವೇ ಇಲ್ಲಿನ ಕಾವ್ಯಭಿವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ.

    Original price was: ₹80.00.Current price is: ₹48.00.
    Add to basket
  • -40%

    ಮಿನುಗು ದೀಪ

    0

    ಮಿನುಗು ದೀಪ
    ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ.

    Original price was: ₹35.00.Current price is: ₹21.00.
    Add to basket
  • -40%

    ಅಲೆಯ ಆಲಾಪ

    0

    ಅಲೆಯ ಆಲಾಪ
    ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
    ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
    ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
    ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
    ಅಲೆಯ ಆಲಾಪ
    ಮುಕ್ಕಾಲು ಪದ್ಯಗಳು
    ಹೈಕು – ಹಂದರ

    Original price was: ₹35.00.Current price is: ₹21.00.
    Add to basket
  • -40%

    ಕಥೆ ಹೇಳುವೆ ಬಾ ಕಂದ

    0

    ಕಥೆ ಹೇಳುವೆ ಬಾ ಕಂದ
    ಈ ಪುಸ್ತಕವು ಹಲವಾರು ಕಥೆಗಳನ್ನು ಒಳಗೊಂಡಿದೆ. ಆ ಕಥೆಗಳೆಂದರೆ :
    ಬುದ್ಧಿವಂತ ಬದರಿ, ನರಿಯ ಸೇಡು, ಹಸಿರು ಚಿನ್ನ, ಮುಯ್ಯಿಗೆ ಮುಯ್ಯಿ, ಕುಸ್ತಿ ಕಲಿತ ಆಮೆ, ಮಂಗೂಸ್ ಮತ್ತು ಹಾವು, ರೈತ ರಾಮಣ್ಣ,  ಪಾಠ ಕಲಿತ ಒಂಟೆ,  ನರಿಯ ಮೋಸ,ಸೊಂಬೇರಿ ಮೊಲ, ಸಿಂಹದ ಜನ್ಮ ದಿನ, ಮೂರ್ಖ ನಾಯಿಗಳು, ಬೆಲೆಯಿಲ್ಲದ ಧನ್ಯತೆ, ವ್ಯಾಪಾರಿಯ ಸಾಕ್ಷಿ, ದೇವರು ಮತ್ತು ಮಾನವ, ಕಪ್ಪೆ ವೈದ್ಯನಾಥ, ಮೇಕೆಯ ಉಪದೇಶ,  ದೇವರು ಕರುಣಾಮಯ, ಕಪ್ಪೆಗಳ ಜಗಳ, ಚಿನ್ನದ ವಿಗ್ರಹ, ಸಂಗೀತಗಾರ ತೋಳ, ಬುದ್ಧಿವಂತ ಕತ್ತೆ, ಸತತ ಪ್ರಯತ್ನದ ಫಲ, ತಾಳ್ಮೆಯ ಫಲ, ದೇವರು ಕೊಟ್ಟ ವರ, ಬುದ್ಧಿವಂತ ಕಲಾವಿದ, ಮೇಧಾವಿ ನ್ಯಾಯಾಧೀಶ, ಪಕ್ಷಿಯ ಉಪಕಾರ, ನರಿಯ ಪುನರ್ಜನ್ಮ, ಮೂರ್ಖ ಸ್ನೇಹಿತರು, ಕುಂಬಾರನ ಪ್ರಾರ್ಥನೆ, ಹೂದಳ ಮತ್ತು ಮುಳ್ಳು, ಪಕ್ಷಿಗಳಿಗೆ ವೈದ್ಯ,  ಕೆಟ್ಟದ್ದು ಮಾಡಬಾರದು,  ಕುತಂತ್ರಿ ಕಾಗೆ, ಬುದ್ಧಿವಂತ ವ್ಯಾಪಾರಿ, ಎದೆಗಾರಿಕೆ, ಕನಸುಗಳು ನಿಜವಾಗುವುವೇ?, ನಂಬಿ ಕೆಟ್ಟ ಕರಿಯಣ್ಣ, ಇಲಿಯ ಚಾತುರ್ಯ, ದೇವರನ್ನು ದೂಷಿಸಬೇಡ,  ಸಮಯಕ್ಕೆ ತಕ್ಕ ನುಡಿ, ಸೋಮಾರಿ ಹಕ್ಕಿಗಳು, ಮ್ಯಾಜಿಕ್ ಗಂಗಾಳ, ಕತ್ತೆ ಜಂಭ, ಕೋತಿಗೇಕೆ ಉಪದೇಶ?, ಸತ್ತ ಮೊಸಳೆ, ಚಿಟ್ಟೆಯ ಹಿರಿಮೆ, ಕುಂಟು ನಾಯಿ, ಎರಡು ಕಪ್ಪೆಗಳು,  ಆನೆಯ ಉದ್ದ ಸೊಂಡಿಲು,ರಾಜಕುಮಾರಿಗೆ ಒಲಿದ ಹಕ್ಕಿ, ಆನೆಯ ಹಲ್ಲು, ನರಿಯ ಉಡುಗೊರೆ, ಪಂಜರದ ಕೋತಿ, ಮೂರ್ಖ ಕಪ್ಪೆ, ನರಿಯ ಉಪಾಯ, ಮುಯ್ಯಿಗೆ ಮುಯ್ಯಿ, ಸಿಂಹದ ಪ್ರೀತಿ.

    Original price was: ₹50.00.Current price is: ₹30.00.
    Add to basket
  • -40%

    ಅಂತರಂಗಯಾನ

    0

    ಅಂತರಂಗಯಾನ
    ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
    ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ!

    Original price was: ₹50.00.Current price is: ₹30.00.
    Add to basket
  • -40%

    ಚೌಕಟ್ಟಿನಾಚೆ

    0

    ಚೌಕಟ್ಟಿನಾಚೆ
    ಕಥಾ ಸಂಕಲನ
    ಉಮೇಶ್ ದೇಸಾಯಿ ಆಧುನಿಕ ಕಾಲದ ತಲ್ಲಣಗಳನ್ನು ಕತೆಗಳ ಮೂಲಕ ಹಿಡಿಯಲು ಹೊರಡುತ್ತಾರೆ. ಅವರದು ಅಪಾರ್ಟ್ ಮೆಂಟು ಬದುಕಿನ ಅಪರೂಪದ ಕಥಾ ಪ್ರಪಂಚ. ಅಪಾರ್ಟುಮೆಂಟು ಬದುಕು ಅನ್ನುವ ಪದವೇ ನಗರಾಧುನಿಕ ಜೀವನಶೈಲಿಯನ್ನೂ ಅದರ ಏಕತಾನತೆ, ಒತ್ತಡ ಮತ್ತು ಏಕಾಂತಗಳನ್ನು ಸೂಚಿಸುತ್ತದೆ. ನಗರ ಜೀವನದ ಅತಿದೊಡ್ಡ ಸಂಕಟವೆಂದರೆ ಏಕಾಂತ, ಕಡಿದ ಕೊಂಡಿಗಳು, ಚದುರಿದ ಸಂಬಂಧಗಳು ಮತ್ತು ಬೆಸೆಯಲಾಗದ ಮನಸ್ಸುಗಳು ಎಂಬುದನ್ನು ಹೇಳುವಂಥ ಅನೇಕ ಕತೆಗಳು ಈ ಸಂಕಲನದಲ್ಲಿವೆ.

    Original price was: ₹120.00.Current price is: ₹72.00.
    Add to basket
  • -40%

    ಯಯಾತಿ

    0

    ‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.

    Original price was: ₹80.00.Current price is: ₹48.00.
    Add to basket