• -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: ₹80.00.Current price is: ₹48.00.
    Add to basket
  • -40%

    Seasons Heart Beat

    0

    It is a collection of Haiku Poems by G.R. Parimala Rao.

    Original price was: ₹50.00.Current price is: ₹30.00.
    Add to basket
  • -40%

    ನಂದನ ವನ

    0

    ನಂದನ ವನ
    ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ.

    Original price was: ₹60.00.Current price is: ₹36.00.
    Add to basket
  • -40%

    ಮರುಭೂಮಿಯ ಹೂ

    0

    “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ” ಪ್ರಶಸ್ತಿ ವಿಜೇತ ಕೃತಿ

    ಕನ್ನಡ ಅನುವಾದ
    ಡಾ. ಎನ್. ಜಗದೀಶ್ ಕೊಪ್ಪ

    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀಳ ಆತ್ಮಕಥೆ “ಮರುಭೂಮಿಯ ಹೂ”.

    Original price was: ₹130.00.Current price is: ₹78.00.
    Add to basket
  • -40%

    Bharata Sindhu Rashmi

    0

    This epic has got Jnanapith award. It’s a summary of Epic Bharata Sindhu Rashmi in English, prepared by the author.

    Original price was: ₹75.00.Current price is: ₹45.00.
    Add to basket
  • -40%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)
    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.

    Original price was: ₹70.00.Current price is: ₹42.00.
    Add to basket
  • -40%

    ಗಿರಿಜಾ ಕಲ್ಯಾಣ

    0

    ಬಿ. ಸುರೇಶ ಅವರ
    ಗಿರಿಜಾ ಕಲ್ಯಾಣ
    ಒಂದು ಆಧುನಿಕ ಪುರಾಣ
    ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.

    Original price was: ₹110.00.Current price is: ₹66.00.
    Add to basket
  • -40%

    ಗರ್ಭಗುಡಿಯ ಶಿಶು ಚೇತನ

    0

    ಗರ್ಭಗುಡಿಯ ಶಿಶು ಚೇತನ
    ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ.

    Original price was: ₹20.00.Current price is: ₹12.00.
    Add to basket
  • -40%

    ಅಜ್ಜಿ ‘ಪಂಚ್’ತಂತ್ರ

    0

    ಅಜ್ಜಿ ‘ಪಂಚ್’ತಂತ್ರ

    ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹಲವು ಹತ್ತು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ.

    Original price was: ₹150.00.Current price is: ₹90.00.
    Add to basket
  • -40%

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು

    0

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು
    ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು.
    ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.

    Original price was: ₹100.00.Current price is: ₹60.00.
    Add to basket
  • -40%

    ಜಲಪಾತ

    0

    ಜಲಪಾತ
    ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
    ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ!

    Original price was: ₹80.00.Current price is: ₹48.00.
    Add to basket