- -8%
ಪರಾಗ
0Original price was: ₹120.00.₹110.00Current price is: ₹110.00.ಪರಾಗ
(ಕವನ ಸಂಕಲನ) :
ಶ್ರೀ ಅರವಿಂದ ಅವರು ಬರೆದ ಮೊದಲ ಕವನ ಸಂಕಲನ ಇದಾಗಿದೆ. ಇವರು ಕರ್ನಾಟಕದವರೇ ಆಗಿದ್ದರೂ ಸಹ ಅವರ ಸರ್ಕಾರಿ ಸೇವೆ ಅವಧಿಯಲ್ಲಿ ಕರ್ನಾಟಕ ಹೊರತು ಪಡಿಸಿ ದೇಶದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪುಣೆಯಲ್ಲಿ ನೆಲೆಸಿದ್ದರು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಅವರ ಜೀವಮಾನದ ಅನುಭವಗಳನ್ನೆಲ್ಲ ಕ್ರೂಡೀಕರಿಸಿ ಬರೆದಂತಹ ಮೊದಲ ಕವನ ಸಂಕಲನ ಇದಾಗಿದೆ. ಅಗಸ್ತ್ಯನಿಂದ ಐ.ಟಿ.ವರೆಗೆ
0₹60.00ಅಗಸ್ತ್ಯನಿಂದ ಐ.ಟಿ.ವರೆಗೆ :
(ದ್ವಿಪಾತ್ರ ನಾಟಕ ಪ್ರಸಂಗಗಳು)ಬಹುಕಲಾವಿದರ ತಂಡಗಳ ಪ್ರದರ್ಶನದಿಂದ ಏಕವ್ಯಕ್ತಿ ಪ್ರದರ್ಶನದ ಹಂತಕ್ಕೆ ಬಂದು ನಿಂತಿರುವ ಇಂದಿನ ದಿನಗಳಲ್ಲಿ ಆರ್ಯರ ದ್ವಿಪಾತ್ರ ನಾಟಕಗಳು ಹೊಸತನ್ನೇ ನೀಡಿ ಮತ್ತು ಸಾಧ್ಯತೆಯನ್ನು ಸಾಬೀತುಪಡಿಸಿವೆ. ಇದರಲ್ಲಿನ ಏಳು ನಾಟಕಗಳು ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಆಯಾ ಕಾಲಘಟ್ಟದ ವಸ್ತುವಿಗೆ ತಕ್ಕಂತೆ ಭಾಷೆಯ ಬಳಕೆ ಮತ್ತು ಸರಳ ಸಂಭಾಷಣೆ ಎನಿಸಿದರೂ ಅವುಗಳ ಒಳ ಅರ್ಥ ಪ್ರೇಕ್ಷಕನ ಮೆದುಳು ಹಾಗೂ ಮನಸ್ಸನ್ನು ಮತ್ತು ಹೃದಯವನ್ನು ಯಶಸ್ವಿಯಾಗಿ ತಲುಪುತ್ತವೆ. ಈಗಾಗಲೇ ಈ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಪುರಸ್ಕಾರಕ್ಕೂ ಪಾತ್ರವಾಗಿವೆ.
ಕಾವ್ಯಸಿಂಧು
0₹0.00ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.
ಎಲ್ಲಿಯೂ ಸಲ್ಲಲಿಲ್ಲ
0₹110.00ಎಲ್ಲಿಯೂ ಸಲ್ಲಲಿಲ್ಲ
ಈ ನಾಟಕವು ನರಸಿಂಹ ಹಿರಣ್ಯಕಶಿಪು, ದೇವತೆಗಳು, ಇವರಾರದೂ ಪೌರಾಣಗಳ ಕತೆಯಲ್ಲ. ಆದ್ದರಿಂದ ನಡೆಯುವ ಪ್ರಸಂಗಗಳಿಗೆ ಪೌರಾಣಗಳ ದೃಷ್ಟಿಯಿಂದ ಲಾಜಿಕ್ ಇರುವುದಿಲ್ಲ. ದೇವಲೋಕ ಅಂಥದೊಂದಿದ್ದರೆ ಮತ್ತು ಮನುಷ್ಯಲೋಕ ಇವುಗಳ ನಡುವಿನ ಕೊಂಡು ಕಳಚಿದವೆನಿಸಿದಾಗ ನಾಟಕ ನಡೆಯುವದು. ದೇವತೆಗಳು, ನಾಟಕ ಆಡೂವವಳು, ಅದರ ಹೊರಗಿನವರು ಹೀಗೆ ಮೂಲಸ್ತರಗಳಲ್ಲಿ ಪ್ರಹಸನ ನಡೆಯುತ್ತದೆ. ಇದು ನಾಟಕದ ವಸ್ತು. ಪೂರ್ಣ ನಾಟಕ ನಡೆದಾಗ ಏನೇನಾಗುವದೋ ಅದೇ ನಾಟಕದ ಕತೆ.ಬಾರೋ ಸಾಧನಕೇರಿಗೆ… ಮತ್ತು ನಿಷ್ಕ್ರಿಯ ಘಾತಕಿ
0₹60.00ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ ಐ. ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕ ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
ಹಾಗೆಯೇ ‘ನಿಷ್ಕ್ರಿಯ ಘಾತಕಿ’ ಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ.