- -40%
ಅಂತರಂಗದ ಮೃದಂಗ
0Original price was: ₹100.00.₹60.00Current price is: ₹60.00.ಅಂತರಂಗದ ಮೃದಂಗ
(ವೈಚಾರಿಕ ಪ್ರಬಂಧಗಳು)
ನರಹಳ್ಳಿಯವರ ಪ್ರಬಂಧಗಳದ್ದು ಸಾವಧಾನದ ವಿಲಂಬಿತ ನಡೆ ಆದುದರಿಂದ ಅದಕ್ಕೆ ದಕ್ಕುವ ಸೂಕ್ಷ್ಮಗಳು ಅಪರೂಪದವು. ಆಧುನಿಕ ಜೀವನದ ಬಿಕ್ಕಟ್ಟುಗಳ ಬಗ್ಗೆ ನರಹಳ್ಳಿಯವರ ಚಿಂತನೆಗಳು ಸ್ವಾನುಭವ ಅನುಸಂಧಾನದಿಂದಲೇ ತತ್ವೀಕರಣಗೊಳ್ಳುವುದರಿಂದ ಅಧೀಕೃತತೆಯ ಮುದ್ರೆಯನ್ನು ಅನಾಯಾಸವಾಗಿ ಪಡೆಯುತ್ತವೆ. ಲಲಿತ ಪ್ರಬಂಧಕ್ಕೆ ಬೌದ್ಧಿಕತೆಯ ಬೆನ್ನೆಲುಬು ದೊರಕಿಸಿದ್ದು ನರಹಳ್ಳಿಯವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಸಮಕಾಲೀನ ಜೀವನದ ಉಪಯೋಗಿ ದೃಷ್ಟಿಯ ಅವಸರ ಗತಿಗೆ ವಿಲಂಬಿತ ನಡೆಯ ಎದುರೀಜು ಹಾಕುವ ಪ್ರಬಂಧಗಳ ಚಿಂತನ ದ್ರವ್ಯ ಹೊಸ ನೆಲೆಯಲ್ಲಿ ಓದುಗ ಯೋಚಿಸುವುದನ್ನು ಒತ್ತಾಯಿಸುವಷ್ಟು ಸಮರ್ಥವಾಗಿವೆ. ಪ್ರಬಂಧಗಳ ಶೈಲಿ ಪು.ತಿ.ನ. ಅವರ ಪ್ರಬಂಧಗಳ ರಚನಾ ಕ್ರಮವನ್ನು ನೆನಪಿಸುವಂತಿವೆ. ಈ ಹೊತ್ತಿನ ಸಾಮಾಜಿಕ ಪಲ್ಲಟಗಳನ್ನು ಗಾಢವಾದ ವಿಶಾದದ ನೆಲೆಯಲ್ಲಿ ಹಿಡಿದಿಡುವ ಈ ಪ್ರಬಂಧಗಳು ನಿರ್ಭಾವುಕ ವೈಚಾರಿಕ ಪ್ರಬಂಧಗಳಿಗೆ ಸಮರ್ಥ ಪರ್ಯಾಯಗಳೆನಿಸುತ್ತವೆ. - -40%
ಸಾಹಿತ್ಯಲೋಕದ ಸುತ್ತ-ಮುತ್ತ
0Original price was: ₹150.00.₹90.00Current price is: ₹90.00.ಸಾಹಿತ್ಯಲೋಕದ ಸುತ್ತ–ಮುತ್ತ :
(ಪ್ರಸಂಗಗಳು)ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿ ”ಸಾಹಿತ್ಯ ಲೋಕದ ಸುತ್ತ–ಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ. ತನ್ನ ಗಮನಕ್ಕೆ ಬಂದ ಸ್ವಾರಸ್ಯಕರ ಸಂಗತಿಗಳನ್ನು ಪೂರ್ವ ಗ್ರಹಗಳಿಲ್ಲದೆ ಆಸ್ವಾದಿಸುತ್ತಾ ಅವುಗಳನ್ನು ಇತರ ಸಾಹಿತ್ಯಾಸಕ್ತರಿಗೂ ದಾಟಿಸುತ್ತಿದ್ದಾನೆ. ಈ ಪುಸ್ತಕವನ್ನು ‘ಪ್ರಸಂಗಗಳು‘ ಎಂದು ಕರೆದಿರುವುದು ಉಚಿತವಾಗಿಯೇ ಇದೆ. ಸಾಹಿತ್ಯ, ರಂಗಭೂಮಿಗಳನ್ನು ಹತ್ತಿರದಲ್ಲಿ ಬಲ್ಲ ಗಿರಡ್ಡಿಯವರು ಪ್ರಸಂಗ‘ಗಳ ಹಲವು ಮಾದರಿಗಳನ್ನು ಇಲ್ಲಿ ಲವಲವಿಕೆ ಇಂದ ನಿರೂಪಿಸಿದ್ದಾರೆ.ಈ ಪ್ರಸಂಗಗಳಲ್ಲಿ ಕೆಲವು ಸಾಂದರ್ಭಿಕ ಹಾಸ್ಯ, ಸಂದಿಗ್ಧತೆ ಮತ್ತು ಅವುಗಳ ಅನಿರೀಕ್ಷಿತತೆಗಳಿಂದ ಮುದಗೊಳಿಸಿದರೆ, ಮತ್ತೆ ಕೆಲವು ಪರಿಚಿತ ಲೇಖಕರ ಅಪರಿಚಿತ ಮುಖಗಳನ್ನು ಕಾಣಿಸಿ ಬೆಚ್ಚಿಬೀಳಿಸುವಂತಿದೆ. ಮತ್ತೆ ಕೆಲವು ಸಾಹಿತ್ಯ ಚರಿತ್ರೆಯ ಭಾಗಗಳಾಗಿಯೂ ಮುಖ್ಯವೆನಿಸುತ್ತದೆ. ಸಾಹಿತ್ಯ ಲೋಕದ ಸುತ್ತಮುತ್ತ ಹಬ್ಬಿರುವ ಗಾಸಿಪ್ಪುಗಳಿಗೆ ಮತ್ತಷ್ಟು ಬಣ್ಣ ತುಂಬುವ ಕೆಲಸವನ್ನಿ ಇಲ್ಲಿ ಗಿರಡ್ಡಿ ಮಾಡ ಹೊರಟಿಲ್ಲ. ಸಾಹಿತ್ಯ ಸಂಶೋಧಕರಂತೆ ಕೆಲವು ವದಂತಿಗಳ ಜಾಡು ಹಿಡಿದು ಇತರ ವ್ಯಕ್ತಿಗಳಿಂದ ಸಾಕ್ಷ್ಯಗಳನ್ನು ಕಲೆಹಾಕಿ, ಕೆಲವೊಮ್ಮೆ ಲಿಖಿತ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಅನಗತ್ಯ ಗೋಜಲುಗಳಿಂದ ಮುಕ್ತಗೊಳಿಸಲು ಶ್ರಮಿಸಿದ್ದಾರೆ.
- -40%
ಹಿಡಿಯದ ಹಾದಿ
0Original price was: ₹100.00.₹60.00Current price is: ₹60.00.ಹಿಡಿಯದ ಹಾದಿ
(ಲಲಿತ ಪ್ರಬಂಧಗಳು)
ಗಿರಡ್ಡಿ ಗೋವಿಂದರಾಜ ಅವರು ತಮ್ಮೆಲ್ಲ ಪೂರ್ವಗ್ರಹಗಳು ವೈಯಕ್ತಿಕ ಬೇಕು ಬೇಡಗಳು, ಸ್ವಂತದ ವಿಚಾರಗಳು ಎಲ್ಲವನ್ನೂ ನಿರ್ಮಲ ಹಾಸ್ಯದಲ್ಲಿ ಯಾರನ್ನೂ ತೇಜೋವಧೆ ಮಾಡದಂತ ತುಂಟತನದಲ್ಲಿ ಆಪ್ತಸಂವಾದದ ಸಹಜ ಬೆಚ್ಚನೆಯ ಧಾಟಿಯಲ್ಲಿ ಈ ಪ್ರಂಬಂಧಗಳನ್ನು ರಚಿಸಿದ್ದಾರೆ. ಇವು ಕನ್ನಡ ಪ್ರಬಂಧಕ್ಕೆ ನಿಜವಾದ ಅರ್ಥದಲ್ಲಿ ಆಧುನಿಕತೆಯ ನೆಲೆಯನ್ನು ದೊರಕಿಸಿವೆ. ಇವುಗಳಲ್ಲಿ ಜೀವನ ದೃಷ್ಟಿ, ಹುರುಪು,ಉಲ್ಲಾಸ, ಹಾಗು ಜೀವಪ್ರೀತಿ ಈ ಪ್ರಬಂಧಗಳ ಮುಖ್ಯ ಶಕ್ತಿ. - -40%
ಮನಸುಖರಾಯನ ಮನಸು
0Original price was: ₹150.00.₹90.00Current price is: ₹90.00.ಮನಸುಖರಾಯನ ಮನಸು :
(ಕತೆ – ಹರಟೆ)
ಇದರಲ್ಲಿರುವ ಆರು ಲೇಖನಗಳಲ್ಲಿ ‘‘ಬಾಶಿಂಗ ಬಲ’’ ‘‘ತ್ರಯಸ್ಥ’’ ಹಾಗೂ ‘‘ಗಧೇ ಪಂಚವೀಶಿ’’ ಇವು ಮೂರು ಕಥಾ ರೂಪಿ ಹರಟೆಗಳು. ‘‘ಗಾಯಕವಾಡ ದಾದಾ’’ ಹರಟೆ ರೂಪಿ ವ್ಯಕ್ತಿ ಚಿತ್ರಣ; ‘‘ಶ್ರದ್ಧಾ’’ ಒಂದು ಬಾಲ್ಯಕಾಲದ ಚಿತ್ರಣ. ‘‘ಪುಸ್ತಕದ ಹುಳ’’ ಒಂದು ಶುದ್ಧ ತಲೆಹರಟೆ ರೂಪಿ ಹರಟೆ…………….