- -40%
ಪಾಲಕರಿಗಾಗಿ
0Original price was: ₹80.00.₹48.00Current price is: ₹48.00.ಪಾಲಕರಿಗಾಗಿ…….
(ಮಕ್ಕಳ ಶೈಕ್ಷಣಿಕ ಅಡಿಪಾಯ)
ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ. - -40%
ಕನ್ನಡ ವ್ಯಾಕರಣ
0Original price was: ₹40.00.₹24.00Current price is: ₹24.00.ಕನ್ನಡ ವ್ಯಾಕರಣ
ಶೈಕ್ಷಣಿಕ ಅಭಿವೃದ್ಧಿಗೆ ಭದ್ರ ನೆಲೆಗಟ್ಟನ್ನು ಒದಗಿಸುವಂಥದ್ದು ಪ್ರಾಥಮಿಕ ಶಾಲಾ ಹಂತ. ನಂತರ ಪ್ರೌಢಶಾಲೆ ಕಾಲೇಜು ಘಟ್ಟಗಳಲ್ಲಿ ಭಾಷಾ ಅಭಿವೃದ್ಧಿ ಪೂರ್ಣತೆಯತ್ತ ಸಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ ಮಾಧ್ಯಮ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣದ ಮೂಲಜ್ಞಾನ ದೊರಬೇಕಾದಷ್ಟು ದೊರೆಯದೆ ಹೋಗುವದರಿಂದ ಇಂದು ಬಹುಪಾಲು ವಿದ್ಯಾರ್ಥಿಗಳ ಕನ್ನಡ ಓದು ಬರಹದ ಸ್ಥಿತಿಗತಿ ಅಷ್ಟಕ್ಕಷ್ಟೆ. ಅಷ್ಟೇ ಏಕೆ, ಪದವೀಧರರ ಕನ್ನಡ ಬರವಣಿಗೆ ಹೇಗಿರುತ್ತದೆಂಬುದು ಎಲ್ಲರ ಅನುಭವಕ್ಕೆ ಬಂದ ವಿಷಯ. ಇಂತಹ ಸಂದರ್ಭದಲ್ಲಿ ಐದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಕನ್ನಡ ವ್ಯಾಕರಣದ ಮೂಲ ಸ್ವರೂಪವನ್ನು ತಿಳಿಸಿ ಕೊಡುವ “ಕನ್ನಡ ವ್ಯಾಕರಣ” ಎಂಬ ಕೃತಿಯನ್ನು ಡಾ.ಜಯಶ್ರೀ ಎಸ್. ಮುದಿಗೌಡರರವರು ಹೊರತಂದಿದ್ದು ಅತ್ಯಂತ ಮಹತ್ವದ ವಿಷಯ.