- -10%
ಗಣಿತಜ್ಞರ ರಸಪ್ರಸಂಗಗಳು
0Original price was: ₹120.00.₹108.00Current price is: ₹108.00.ಗಣಿತಜ್ಞರೆಂದರೆ ಪ್ರಪಂಚದ ವ್ಯವಹಾರಗಳಿಗೆ ತಲೆಕೆಡಿಸಿಕೊಳ್ಳದವರು, ತಮ್ಮದೇ ಲೋಕದಲ್ಲಿ ಮುಳುಗಿರುವವರು, ಅನ್ಯಮನಸ್ಕರು ಎಂಬೆಲ್ಲ ಅಭಿಪ್ರಾಯಗಳಿವೆ. ಅದು ನಿಜವೇ ಅನ್ನಿ. ಆದರೆ ಗಣಿತಜ್ಞರ ಬದುಕಿನಲ್ಲೂ ಸಾಕಷ್ಟು ಹಾಸ್ಯ ಪ್ರಸಂಗಗಳು, ತಮಾಷೆಯ ಸನ್ನಿವೇಶಗಳು ನಡೆಯುತ್ತವೆ. ಅೆಂಥ ೮೫ಕ್ಕೂ ಹೆಚ್ಚಿನ ಬಗೆ ಬಗೆಯ ರಸಮಯ ಸಂದರ್ಭಗಳನ್ನು ರೋಹಿತ್ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಇಲ್ಲಿ ವಿಶ್ವವಿಖ್ಯಾತ ಗಣಿತಜ್ಞರಿದ್ದಾರೆ. ನಾವು ಹೆಸರೇ ಕೇಳದ ವ್ಯಕ್ತಿಗಳೂ ಇದ್ದಾರೆ. ‘ಮುಂದೊಂದು ದಿನ ಒಬ್ಬ ದೊಡ್ಡ ಗಣಿತಜ್ಞ ‘ನಾನು ಚಿಕ್ಕವನಿದ್ದಾಗ ಅದೊಂದು ಪುಸ್ತಕ ಓದಿದೆ. ಆಸಕ್ತಿ ಹುಟ್ಟಿ ಗಣಿತದೊಳಗೆ ಹೊಕ್ಕೆ’ ಎನ್ನಲಿ ಎಂಬ ಆಸೆಯಿಂದಲೇ ಈ ಪುಸ್ತಕ ಬರೆದಿದ್ದೇನೆ’ ಎಂದಿದ್ದಾರೆ ಲೇಖಕ ರೋಹಿತ್ ಚಕ್ರತೀರ್ಥ.
- -10%
ಪಿಂಚ್ ಆಫ್ ಪ್ರಪಂಚ
0Original price was: ₹120.00.₹108.00Current price is: ₹108.00.ಕಳೆದ ಇಪ್ಪತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿರುವ, ಅಲ್ಲಿಯ ಸಂಸೃತಿ ಸಂಪ್ರದಾಯಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ, ಸ್ಪ್ಯಾನಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ರಂಗಸ್ವಾಮಿ ಮೂಕನಹಳ್ಳಿ, ತಾನು ನೋಡಿದ, ಓಡಾಡಿದ ಒಟ್ಟು ಹತ್ತು ದೇಶಗಳನ್ನು ಇಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಸ್ಪೇನ್, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್, ಮಲೇಷ್ಯನಂಥ ಹೆಸರುವಾಸಿ ದೇಶಗಳ ಜೊತೆಗೇ ಲಿಚನ್ ಸ್ಟೈನ್, ಅಂದೋರ, ಪೋರ್ಚುಗಲ್ ನಂಥ ವಿಶಿಷ್ಟ ದೇಶಗಳ ಬಗ್ಗೆಯೊ ಇಲ್ಲಿ ಅಪರೂಪದ ಮಾಹಿತಿ ಕಣಜವೇ ಇದೆ . ಪ್ರತಿ ದೇಶದ ಕುರಿತೊ ವಿಡಿಯೋಗಳಿವೆ . ಆಯಾ ದೇಶದ ಪ್ರವಾಸ ಮಾಡಲು ಬೇಕಾದ ಅತ್ಯಗತ್ಯ ಮಾಹಿತಿಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಪ್ರತಿ ಪುಟದಲ್ಲೂ ಆ ದೇಶಗಳಿಗೆ ಸಂಬಂಧಿಸಿದ ವಿಶಿಷ್ಟ ಒನ್ ಲೈನರ್ಸ್ ಇವೆ. ಸೂಕ್ತ ಚಿತ್ರಗಳು ಅಲ್ಲಲ್ಲಿ ಬಂದಿವೆ. ಪ್ರವಾಸ ಹೊರಡುವವರು ಗಮನಿಸಲೇಬೇಕಾದ ಅೆಂಶಗಳ ಬಗ್ಗೆ ಸ್ವತಃ ಲೇಖಕರೇ ವಿಡಿಯೋ ಮಾಡಿದ್ದಾರೆ . ಒಟ್ಟಾರೆಯಾಗಿ ಇದು ಪ್ರವಾಸ ಕಥನವಷ್ಟೇ ಅಲ್ಲ, ಪ್ರವಾಸಿ ಗೈಡ್ ಕೂಡ ಹೌದು. ಓದಬಹುದಾದ, ನೋಡಬಹುದಾದ ಆಧುನಿಕ ಪುಸ್ತಕ ಇದು.
- -1%
ವೈಚಾರಿಕ ಸಮರಕ್ಕೆ ಓಪನ್ ಚಾಲೆಂಜ್
0Original price was: ₹150.00.₹149.00Current price is: ₹149.00.ದೇಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದ್ದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ದಿಜಿೇವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಗಳ ವಿಚಾರದಲ್ಲಿ ಕಾಳೆಷ್ಟು ಜೋಳೆಷ್ಟು? ಈ ಪ್ರಗತಿಪರ ಜಿವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ ‘ಓಪನ್ ಚಾಲೆಂಜ್’ ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲ್ಲಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ ‘ಓಪನ್ ಚಾಲೆಂಜ್ ಕೈಗೆತ್ತಿಕೊಳ್ಳಿ.
- -10%
ಗಂಧದ ಮಾಲೆ
0Original price was: ₹120.00.₹108.00Current price is: ₹108.00.ದೆವ್ವದ ಸರ್ಕಾರಗಳ ಕೈಯಲ್ಲಿ ನರಕಯಾತನೆ ಅನುಭವಿಸಿದವರ ದಾರುಣ ಕಥೆಗಳನ್ನು, ಜಗತ್ತಿನ ಅತ್ಯಂತ ಬುದ್ಧಿವಂತರೆಂದು ಕರೆದುಕೊಳ್ಳುವವರ ಕರುಣಾಜನಕ ಕಥೆಗಳನ್ನು ಪುಸ್ತಕದಲ್ಲಿ ಅಡಕಮಾಡಲಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಮಹಾನ್ ಚೇತನರಾಗಲು ಬೇಕಾದ ಚೈತನ್ಯವಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಮಹಾತ್ಮರು ಮಾತ್ರ ಬರುತ್ತಿದ್ದಾರೆ! ಯಾಕಿಲ್ಲ? ಈ ಸಣ್ಣ ಕಥೆಗಳಲ್ಲಿ ಓದುಗರು ಉತ್ತರವನ್ನು ಕಂಡುಕೊಳ್ಳಬಹುದು.
- -10%
ವೃಂದಾವನ
0Original price was: ₹120.00.₹108.00Current price is: ₹108.00.ವಿಶ್ವವಾಣಿ ಪತ್ರಿಕೆಯ ‘ಚಕ್ರವ್ಯೂಹ’ ಅಂಕಣದಲ್ಲಿ ಬರೆದ ಅಸಂಖ್ಯಾತ ಲೇಖನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅನೇಕ ಸಾಧಕರ ಸಾಧನೆಯ ಸಂಕಲನ ‘ಬೃಂದಾವನ’. ಇದು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಯ ಕ್ರೋಢೀಕರಣ. “ವೃದವನ” ಸತ್ತವರ ಕಥೆಯಲ್ಲ, ಯಾರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆಯೋ ಅವರ ಕಥೆಗಳಲ್ಲ.