- -10%
ಅಂಜುಮಲ್ಲಿಗೆ
0Original price was: ₹90.00.₹81.00Current price is: ₹81.00.ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.
- -40%
ಅಂಜುಮಲ್ಲಿಗೆ
0Original price was: ₹80.00.₹48.00Current price is: ₹48.00.‘ಅಂಜುಮಲ್ಲಿಗೆ’ ನಾನು ಆಕ್ಸಫರ್ಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ಆಧರಿಸಿ ಬರೆದದ್ದು. ೧೯೬೦ರ ದಶಕದಲ್ಲಿ ಬ್ರಿಟನ್ನಿನಲ್ಲಿ ಭಾರತೀಯರು ತೀರ ಕಡಿಮೆ ಸಂಖ್ಯೆಯಲ್ಲಿದ್ದರು. ಇಂದು ಆ ದೇಶವನ್ನೇ ವ್ಯಾಪಿಸಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಮಾನಸಿಕ ತುಮುಲಗಳು ಅಂದಿಗಿಂತ ಬೇರೆಯಾಗಿರಬಹುದು.
ಗಿರೀಶ ಕಾರ್ನಾಡ