- -40%
ಆಳ್ವಾರರು ಮತ್ತು ಹರಿದಾಸರು
0Original price was: ₹50.00.₹30.00Current price is: ₹30.00.ಆಳ್ವಾರರು ಮತ್ತು ಹರಿದಾಸರು
ಹರಿದಾಸರು, ಆಳ್ವಾರುಗಳು, ಶರಣರು, ಉತ್ತರ ಭಾರತೀಯ ಭಕ್ತಿ ಸಾಹಿತ್ಯ ರಚಯಿತರಾದ ಸಂತರು, ಭಕ್ತರು – ಇವರೇ ನಮ್ಮ ಸಂಸ್ಕೃತಿಯನ್ನು ಆಪತ್ಕಾಲದಲ್ಲಿ ವಿದೇಶೀಪ್ರಭಾವ, ಮತಾಂತರ ಹಾವಳಿಯಿಂದ ರಕ್ಷಿಸಿದವರು. ಯೋಗಿಗಳು, ಜ್ಞಾನಿಗಳು. ಪ್ರಕೃತ ಗ್ರಂಥದಲ್ಲಿ ನಾನು ಆಳ್ವಾರರುಗಳ ಮತ್ತು ಹರಿದಾಸರ ಕೊಡುಗೆಗಳು, ಶೈಲಿ ವ್ಯತ್ಯಾಸಗಳು, ಪರಸ್ಪರ ಪ್ರಭಾವಸಾಧ್ಯತೆಗಳನ್ನು ಕುರಿತು ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ನೀಡಿದ ಉಪನ್ಯಾಸಗಳ ಮರುಮುದ್ರಣವಿದು.
ಎಲ್ಲ ವೇದಾಂತವೂ ಅದಕ್ಕೆ ಪೂರಕವಾದ ತರ್ಕ ವ್ಯಾಕರಣಾದಿ ಶಾಸ್ತ್ರಗಳೂ ಪರಿಪೂರ್ಣತೆ ಹೊಂದಿ, ಪರಿಸಮಾಪ್ತಿ, ಸಮಗ್ರ ಪ್ರತ್ಯಕ್ಷಾನುಭವದ ರೂಪದಲ್ಲಿ ಉಪಾಸಕನಿಗೆ ದೊರಕುವುದೇ “ಯೋಗ”ದಲ್ಲಿ. ಹಾಗೆಂದರೆ ಬರೀ “ಆಸನ”ಗಳಲ್ಲ, ದೇಹ ವ್ಯಾಯಾಮ ಅಲ್ಲ. ಅಷ್ಟಾಂಗ ಯೋಗವಿಜ್ಞಾನಕ್ಕೇ ಭಕ್ತಿ ಎಂದು ಬೇರೊಂದು ಹೆಸರು. ಪಾತಂಜಲಯೋಗಕ್ಕೂ ಪೂರ್ವದ್ದು ಅಧ್ಯಾತ್ಮ ವೈದಿಕ ಯೋಗ. “ಮನಸ್ಸನ್ನು ದೇವರಿಂದ ತುಂಬುವುದೇ ಯೋಗ”. (ಯುಜ್ ಸೇರಿಸುವುದು). ಮನಸ್ಸನ್ನು “ಖಾಲಿ” ಮಾಡುವುದಲ್ಲ!