ಮೃಗಶಿರ
‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ, ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು.