• -40%

    ಆಕಾಶ ಸೇತುವೆ

    0

    ಆಕಾಶ ಸೇತುವೆ
    (ಟಿಂಟರ್ನ್ ಅಬೆ ಮತ್ತು ಇತರ ಕವನಗಳು )
    ಈಚೆಗೆ ಮಲೇಶಿಯಾಕ್ಕೆ ಹೋಗಿದ್ದೆ. ಲಂಕಾವಿ ಮಲೇಶಿಯಾದ ಒಂದು ಸುಂದರ ದ್ವೀಪ. ಪ್ರಕೃತಿಯ ಅಗಾಧತೆಯನ್ನು ಅರಿವಿಗೆ ತಂದುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿರುವ ಮ್ಯಾತ್ ಮ್ಯಾಂಚಿಂಗ್ ಚಾಂಗ್ ಪರ್ವತ ಶ್ರೇಣಿಯು ನಿಜಕ್ಕೂ ‘ಗಗನಚುಂಬಿ’ ಎಂಬ ಮಾತನ್ನು ನಮ್ಮ ಅನುಬೋಧೆಗೆ ತರುವಂಥದ್ದು. ದಟ್ಟ ಕಾಡಿಂದ ಹಚ್ಚ ಹಸುರಾಗಿ ಕಂಗೊಳಿಸುವ ಆ ನಿತ್ಯ ಹರಿದ್ವರ್ಣ ಪರ್ವತಪಂಕ್ತಿಯಲ್ಲಿ ಅಲ್ಲಲ್ಲಿ ಆಕಾಶಕ್ಕೆ ಎಟಕಾಯಿಸುವ ಮಹೋನ್ನತ ಪರ್ವತ ಶೃಂಗಗಳಿವೆ. ಅಂಥ ಎರಡು ಶೃಂಗಗಳ ನಡುವೆ ಒಂದೇ ಸ್ತಂಭ ತೂಗಿ ಹಿಡಿದಿರುವ, ಪರ್ವತಗಳ ಬಟ್ಟು ಹಾಕಿದ ತೂಗು ಸೇತುವೆಯಿದೆ. ಅದನ್ನು ಅಲ್ಲಿಯ ಜನ ಆಕಾಶ ಸೇತುವೆ ಎನ್ನುತ್ತಾರೆ. ಆ ಆಕಾಶ ಸೇತುವೆ ಒಂದು ಭಾಷೆಯೊಂದಿಗೆ ಮತ್ತೊಂದು ಭಾಷೆಗೆ ಸಂಬಂಧ ಕಲ್ಪಿಸುವ ಅನುವಾದ ಕ್ರಿಯೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎನ್ನಿಸಿತು ನನಗೆ!

    Original price was: ₹70.00.Current price is: ₹42.00.
    Add to cart
  • -40%

    ಪರಿತ್ಯಕ್ತ ಮತ್ತು ಇತರ ಕತೆಗಳು

    0

    ಪರಿತ್ಯಕ್ತ ಮತ್ತು ಇತರ ಕತೆಗಳು
    ಮೊದಲ ಸ್ಪಂದನ
    ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.

    Original price was: ₹60.00.Current price is: ₹36.00.
    Add to cart
  • -40%

    ಪಾಲಕರಿಗಾಗಿ

    0

    ಪಾಲಕರಿಗಾಗಿ…….
    (ಮಕ್ಕಳ ಶೈಕ್ಷಣಿಕ ಅಡಿಪಾಯ)
    ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ.

    Original price was: ₹80.00.Current price is: ₹48.00.
    Add to cart
  • -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: ₹60.00.Current price is: ₹36.00.
    Add to cart
  • -40%

    ಅಕ್ವೇರಿಯಮ್ ಮೀನು

    0

    ಅಕ್ವೇರಿಯಮ್ ಮೀನು
    ಇದು ನನ್ನ ಮೊದಲ ಕವನ ಸಂಕಲನ. ಆಗೀಗ ಬರೆಯುತ್ತ ಬಂದ ಕವಿತೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಗ್ರಹಿಸಿದ್ದೇನೆ. ಕೆಲವು ರೂಪಾಂತರಗಳೂ ಇವೆ. ನಲ್ವತ್ತೊಂದು ವರ್ಷಗಳ ಹಿಂದೆ ನನ್ನ ಕವನ ಸಂಕಲನ ‘ಅಕ್ವೇರಿಯಮ್ ಮೀನು’ ಪ್ರಕಟವಾಯಿತು.

    Original price was: ₹70.00.Current price is: ₹42.00.
    Add to cart
  • -40%

    ಷಾಪುರದ ಸೀನಿಂಗಿ-ಸತ್ಯ

    0

    ಷಾಪುರದ ಸೀನಿಂಗಿ-ಸತ್ಯ
    ಇದು ೧೯೯೨ರಲ್ಲಿ ಆರಂಭಿಸಿ ೧೯೯೫ರಲ್ಲಿ ಬರವಣಿಗೆ ಮುಗಿಸಿದ ನಾಟಕ. ಈ ನಾಟಕ ಬರೆಯಲು ಕಾರಣರಾದವರು ಬಿ. ಜಯಶ್ರೀ. ಅವರ ತಂಡಕ್ಕಾಗಿಯೇ ನಾಟಕ ಕಟ್ಟಲು ಹೊರಟವನಿಗೆ ಹಿರಿಯರು, ಮೇಷ್ಟರು ಆದ ಕ.ವೆಂ. ರಾಜಗೋಪಾಲ ಅವರು ಜನಪದ ಗೀತೆಯೊಂದನ್ನು ಕೇಳಿಸಿ ವಸ್ತುವನ್ನು ಒದಗಿಸಿದರು. ಅಲ್ಲಿಂದಾಚೆಗೆ ಅನೇಕ ಊರುಗಳನ್ನು ತಿರುಗಿ, ಅನೇಕ ಪವಾಡ ಸದೃಶ ಸತ್ಯಗಳನ್ನು ಸ್ವತಃ ಕಂಡೆ. ಜೀವಂತ ದೇವರುಗಳ ದರುಶನ ಪಡೆದೆ. ಈ ಪಯಣದಲ್ಲಿ ಜೊತೆಯಾದ ಗುಲ್ಬರ್ಗದ ವಿಜಯಹಾಗರಗುಂಡಿಗಿಯ ಸಹವಾಸವು ನಾನು ಕಂದ್ದನ್ನ ವಿಭಿನ್ನವಾಗಿ ಅರ್ಥೈಸಲು ಸಹಾಯಮಾಡಿತು.

    Original price was: ₹70.00.Current price is: ₹42.00.
    Add to cart
  • -40%

    ಹಾಗೇ ಸುಮ್ಮನೇ

    0

    ಹಾಗೇ ಸುಮ್ಮನೇ
    ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು  ಆಗಾಗ್ಗೆ ಬರೆದು  ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ  ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ  ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ,  ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ  ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ.  ಅವರ ಮುಖದಲ್ಲಿ ಅರಳಿದ  ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.

    Original price was: ₹50.00.Current price is: ₹30.00.
    Add to cart
  • -40%

    ಕೋತಿಕಥೆ

    0

    ಕೋತಿಕಥೆ
    ಬೆಸಗರಹಳ್ಳಿ ರಾಮಣ್ಣ
    ರಂಗರೂಪ
    ಸುರೇಶ ಬಿ.
    ಇದೊಂದು ರಾಜಕೀಯ ನಾಟಕ.

    Original price was: ₹70.00.Current price is: ₹42.00.
    Add to cart
  • -40%

    ಓಡಬೇಡ ಎದುರಿಸು…

    0

    ಓಡಬೇಡ ಎದುರಿಸು…
    ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
    ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ.

    Original price was: ₹110.00.Current price is: ₹66.00.
    Add to cart
  • -40%

    ರೆಕ್ಕೆ ಕಟ್ಟುವಿರಾ

    0

    ರೆಕ್ಕೆ ಕಟ್ಟುವಿರಾ:
    ೧೯೪೫ ರಲ್ಲಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾ ಮೊದಲಬಾರಿಗೆ ಅಣುಬಾಂಬನ್ನು ಜಪಾನಿನ ಮೇಲೆ ಎಸೆಯಿತು. ಹಿರೋಷಿಮಾ, ನಾಗಾಸಾಕಿ ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನತೀರಿಕೊಂಡರು. ಲಕ್ಷಾಂತರ ಜನ ಅಂಕವಿಕಲರಾದರು. ಜೀವ ಉಳಿಸಿಕೊಂಡ ಒಬ್ಬೊಬ್ಬರ ಬದುಕೂ ದಾರುಣವಾಯಿತು. ಅದಾಗಿ ಮೂರು ತಲೆಮಾರುಗಳು ದಾಟಿದರೂ ಹುಟ್ಟುವ ಮಕ್ಕಳ ಕೈಕಾಲುಗಳು ಊನವಾಗಿವೆ. ಅಣುಬಾಂಬ್ ಎಂತಹ ವಿನಾಶಕಾರಿ ಎಂಬುದಕ್ಕೆ ಇಡೀ ಸಮುದಾಯ ಸಾಕ್ಷಿಯಾಗಿ ನಿಂತಿದೆ.
    ಇಂತಹ ಸಮುದಾಯದ ನಡುವೆ ಪುಟ್ಟ ಸಂಸಾರ, ಸುಂದರ ಬದುಕು ಎಂದು ಕನಸು ಕಟ್ಟಿಕೊಂಡು ಬದುಕುತ್ತಿದ್ದ “ಕಿನ್ಲು” ಎಂಬ ಮಹಿಳೆ ಬಾಂಬಿನ ಅನುಭವವನ್ನು, ಅದು ತನ್ನ ಕನಸುಗಳನ್ನು ನುಚ್ಚುನೂರು ಮಾಡಿದ್ದನ್ನು ಕುರಿತು ೨೫ ವರ್ಷಗಳಾದ ನಂತರ ಹೇಳಿಕೊಂಡ ವಿವರಗಳು ಈ ನಾಟಕಕ್ಕೆ ಕಾರಣವಾಗಿದೆ.

    Original price was: ₹70.00.Current price is: ₹42.00.
    Add to cart
  • -40%

    ಕಾಡು ಮಲ್ಲಿಗೆ

    0

    ಕಾಡು ಮಲ್ಲಿಗೆ
    ೧೯೮೪ರಲ್ಲಿ ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಕುರಿತ ವಿಚಾರ ಸಂಕಿರಣ ನಡೆದಾಗ ಈ ನಾಟಕವನ್ನು ಸಿದ್ಧಪಡಿಸಲಾಯಿತು.
    “ಟೆರೇಸ್ ಥಿಯೇಟರ್” ಎಂಬ ಆಲೋಚನೆಯಡಿಯಲ್ಲಿ ಕಲಾಮಂದಿರದ ಮಹಡಿಯ ಮೇಲೆ ಮೊದಲ ಪ್ರಯೋಗವನ್ನು ಬಿ.ಸುರೇಶ ನಿರ್ದೇಶನದಲ್ಲಿ ಚಿತ್ರಾ ತಂಡದ ಗೆಳೆಯರು ಅಭಿನಯಿಸಿದರು. ಬೆಂಗಳೂರು ದೂರದರ್ಶನದ ಮೂಲಕ ೧೯೯೧ರಲ್ಲಿ ನಾಟಕವು ಪ್ರಸಾರವಾಯಿತು.
    ಈ ನಾಟಕ ಕತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳದ್ದು ಸುಮಾರು ೧೯೫೦ರ ಆಸುಪಾಸು. ಆದರೆ ೧೯೭೦ರ ದಶಕದ ಭರತರಾಜ್ ಸಿಂಗ್ ಅವರ ವಿವರವೂ ಮಾತಾಗಿ ನಾಟಕದಲ್ಲಿ ಬರುತ್ತದೆ.
    ಹೀಗೆ ‘ಕಾಲ’ವನ್ನು ಹಾರುವುದು ವಿಮರ್ಶಾ ಮಾನ್ಯವಲ್ಲ, ಆದರೆ ಕಷ್ಟವಲ್ಲ. ಅಭಿನಯಿಸುವವರಿಗೆ ಎದುರಿಗೆ ಕೂತವರು ಪ್ರಬುದ್ಧರು ಎಂಬ ನಂಬಿಕೆ ಇದ್ದರೆ ಸಾಕು.
    ಹೀಗೆಯೇ ೧೯೬೦ರ ದಶಕದ ಮಿಲ್ಲುಗಳ ಮುಷ್ಕರ ಹಾಗೂ ಗೋಲಿಬಾರು ಸಹ ಈ ನಾಟಕದೊಳಗೆ ಪ್ರಸ್ತಾಪವಾಗುತ್ತದೆ. ಈ ‘ಕಾಲೋಲ್ಲಂಘನ” ಕಥನ ಕಾರಣಕ್ಕಾಗಿ ಮಾತ್ರ ಆಗಿದೆ.

    Original price was: ₹70.00.Current price is: ₹42.00.
    Add to cart
  • -40%

    ವಿಚ್ಛೇದನಾ ಪರಿಣಯ

    0

    ವಿಚ್ಛೇದನಾ ಪರಿಣಯ
    ಕತೆಯನ್ನು ಹುಡುಕುವ ಒಂದು ಕಾದಂಬರಿ
    ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.

    Original price was: ₹70.00.Current price is: ₹42.00.
    Add to cart