ಎಲ್ಲರಂತೆ ಏಕೆ ಸಾಮಾಜಿಕ ಕಾದಂಬರಿ, ಅಮೆರಿಕಾದ ಕನ್ನಡತಿಯರ ಬದುಕಿನ ಹಲವು ಮುಖಗಳನ್ನು ತೋರಿಸುವ ಕಥಾಮಾಲಿಕೆ ಆಗಿದೆ. ಪಿಯುಸಿ ಶ್ವೇತಾ, ಸ್ನೇಹಾ, ಶಿವಾನಿ, ಕವಿತಾ ಕುಸುಮಾ, ಶಾರದಾ, ನಿಶಾ, ಧನ್ಯಾ ಕಾಲೇಜಿನ ಬದುಕಿನಿಂದ ವೈವಾಹಿಕ ಜೀವನದವರೆಗೆ ಅವರ ತಾರುಣ್ಯ, ಆಸೆ ಆಕಾಂಕ್ಷೆಗಳು ಅವರಿಗೆ ದೊರೆತ ಅವಕಾಶಗಳು, ಹೊಸ ತಲೆಮಾರಿನ ಆಶೋತ್ತರಗಳು ಹಳೆಯ ತಲೆಮಾರಿನ ಮೌಲ್ಯಗಳು ಇವುಗಳ ಪ್ರತಿಪಾದನೆ ಈ ಕಾದಂಬರಿಯಲ್ಲಿ ಸಣ್ಣ ಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ.