ಭಕ್ತಿ ಕುಸುಮಾಂಜಲಿ
‘ಭಕ್ತಿ ಕುಸುಮಾಂಜಲಿ’ಯಲ್ಲಿ ವೈವಿಧ್ಯಮಯ ಹಾಡುಗಳಿವೆ. ಗಣಪತಿಯ ಹಾಡು, ನವರಾತ್ರಿಯ ಹಾಡು, ಕೃಷ್ಣನ ಹಾಡು, ಸತ್ಯ ನಾರಾಯಣ ಪೂಜೆಯ ಹಾಡು, ದೀಪಾವಳಿಯ ಹಾಡು, ಈಶ್ವರನ ಹಾಡು, ಗುರುವಿನ ಹಾಡು ಹೀಗೆ ವಿವಿಧ ಹಬ್ಬಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿಗಳಲ್ಲಿ ಹೇಳಲ್ಪಡುವ ವಿಶಿಷ್ಟವಾದ ಹಾಡುಗಳು ಇಲ್ಲಿವೆ. ಸಂಪೂರ್ಣ ರಾಮಾಯಣ ಉತ್ತರಕಾಂಡವೂ ಸೇರಿದಂತೆ, ಮಂಜಗುಣಿ ಮಹಾತ್ಮೆ, ಗಜೇಂದ್ರ ಮೋಕ್ಷ, ಸುದಾಮ ಚರಿತೆ, ಶ್ಯಮಂತಕಮಣಿ ಚರಿತ್ರೆಯ ಸುದೀರ್ಘ ಕಥನದ ಹಾಡುಗಳು ಇಲ್ಲಿ ಪ್ರಕಟವಾಗುತ್ತಿವೆ.