ಸೋಲು ಗೆದ್ದವನದ್ದು!
ನಕ್ಸಲ್ ಹಾಗು ಪೊಲೀಸರ ನಡುವಿನ ಸಂಘರ್ಷದ ಕಥಾಹಂದರ ಒಳಗೊಂಡಿದೆ.‘ಸೋಲು ಗೆದ್ದವನದ್ದು!’ ಕಾದಂಬರಿ ನಕ್ಸಲರು ಮತ್ತು ಪೊಲೀಸರ ನಡುವಿನ ‘ಮಾಡು ಇಲ್ಲವೇ ಮಡಿ’ ಸಮರಕ್ಕೆ ಸಂಬಂಧಿಸಿದ ಕಥಾನಕವೆಂಬಂತೆ ಮೇಲ್ನೋಟಕ್ಕೆ ತೋರಿದರೂ ಅದರ ಆಂತರ್ಯದಲ್ಲಿ ಮನುಷ್ಯನೊಳಗಿನ ಜೀವನ ಪ್ರೀತಿ, ನೋವು, ನಲಿವು, ಆಸೆ, ಹತಾಶೆ, ಮುಗ್ಧತೆ, ಕ್ರೌರ್ಯ ಎಲ್ಲವೂ ಹುದುಗಿದೆ.
ಇಲ್ಲಿನ ಕಥಾಹಂದರ ಕಾಲ್ಪನಿಕವೇ ಆಗಿದ್ದರೂ, ಅಲ್ಲಲ್ಲಿ ಎದುರಾಗುವ ಸನ್ನಿವೇಶಗಳು ಕಲ್ಪನೆಯ ಪರದೆ ಹೊದ್ದುಕೊಂಡಿರುವ ನೈಜ ಘಟನೆಗಳೆಂಬಂತೆ ಭಾಸವಾಗುತ್ತವೆ.