ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
$3.30Original price was: $3.30.$2.98Current price is: $2.98.
ಡಾ||ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
-ಡಾ||ಬಿ.ಎಸ್.ಶ್ರೀನಾಥ್
$0.78Original price was: $0.78.$0.71Current price is: $0.71.
ಪುಟಾಣಿ ಎಂಬುದು ಫೋಟಾನ್ ಎಂಬ ಚೈತನ್ಯದ ಪೊಟ್ಟಣವನ್ನು ಸೂಚಿಸುವ ಕಣ. ಮುಖ್ಯವಾಗಿ ಬೆಳಕನ್ನು ಪ್ರತಿನಿಧಿಸುವ ಕಣ. ಇದು ಸೂರ್ಯನಲ್ಲಿ ಉತ್ಪತ್ತಿಯಾಗುವುದು ಹೇಗೆ? ನಮ್ಮನ್ನು ತಲುಪುವುದು ಹೇಗೆ? ಇಂತಹ ವೈಜ್ಞಾನಿಕ ವಿವರಗಳನ್ನು ತಿಳಿಹೇಳಲು ಭೌತ ವಿಜ್ಞಾನ ಹಾಗೂ ಗಣಿತದ ಬುನಾದಿ ಅತಿ ಅವಶ್ಯ. ಆದರೆ ಚಿಕ್ಕ ಮಕ್ಕಳಿಗೆ ಕತೆಯ ರೂಪದಲ್ಲಿ ಹೇಳುವ ಪ್ರಯತ್ನವೇ ಈ ಪುಸ್ತಕ.
$0.90Original price was: $0.90.$0.82Current price is: $0.82.
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ.
$2.10Original price was: $2.10.$1.90Current price is: $1.90.
ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.
$0.36Original price was: $0.36.$0.32Current price is: $0.32.