ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯ ಆಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು. ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್.
ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ