ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ-ಕಿಟ್ಟ ವಿಜ್ಞಾನ ಸಂವಾದ.’ ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ‘ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
$0.60Original price was: $0.60.$0.54Current price is: $0.54.
ಇಲ್ಲಿರುವ ಅಧ್ಯಾಯಗಳು ಇಪ್ಪತ್ತನೇ ಶತಮಾನದ ಆರಂಭದಲ್ಲಿ ರಷ್ಯಾದಲ್ಲಿ ಕಾರ್ಮಿಕರ ನೇತೃತ್ವದಲ್ಲಿ ನಡೆದಿದ್ದ ಅಕ್ಟೋಬರ್ ಕ್ರಾಂತಿಯು ಹುಟ್ಟಿಸಿದ್ದ ಹೊಸ ಭರವಸೆಗಳು, ಎರಡನೇ ಮಹಾಯುದ್ಧದಲ್ಲಿ ಹೊರಹೊಮ್ಮಿದ್ದ ಫ್ಯಾಸಿಸ್ಟ್ ಹುಚ್ಚಾಟದ ಕರಾಳತೆಗಳು, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಯುದ್ಧೋನ್ಮಾದಗಳು ಇತ್ಯಾದಿಗಳ ಬಗ್ಗೆಯೂ, ಇವುಗಳ ನಡುವೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಯಶಸ್ವೀ ಪ್ರಯೋಗಗಳ ಬಗ್ಗೆಯೂ ಈ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಪ್ರಸ್ತಾಪಿಸಲಾಗಿದೆ.
$1.80Original price was: $1.80.$1.62Current price is: $1.62.
ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.
$0.54Original price was: $0.54.$0.49Current price is: $0.49.
ಮನಸ್ಸಿಗೆ ಸಂಬಂಧಿಸಿದ ದಾರ್ಶನಿಕ ಪರಿಕಲ್ಪನೆಗಳೇ ಹೆಚ್ಚಿರುವ ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಮಾನಸಿಕ ಕ್ರಿಯೆಯ ವೈಜ್ಞಾನಿಕವೆನಿಸುವ ಅರಿವನ್ನು ತಂದುಕೊಳ್ಳಲು ಈ ಕೃತಿ ಸಹಾಯ ಮಾಡುವುದು.
$2.10Original price was: $2.10.$1.89Current price is: $1.89.
ನಾಡನ್ನು ಪ್ರೀತಿಸುವ, ಅನ್ನದಾತರ ನೋವಿಗೆ ದನಿಗೂಡಿಸುವ, ಬಿಕ್ಕಟ್ಟು ನಿವಾರಿಸಬೇಕೆಂದು ಆಲೋಚಿಸುವ ಎಲ್ಲರಿಗೂ ಈ ಹೊತ್ತಗೆ ಕೈಪಿಡಿಯಾಗಲಿದೆ. ಅಂಕಿಅಂಶಗಳ ಸಹಿತ ವಸ್ತುನಿಷ್ಠವಾಗಿ ಓದುಗರ ಮುಂದಿಟ್ಟಿರುವ ವಿಚಾರಗಳು ಆರೋಗ್ಯಕರ ಚರ್ಚೆ-ಸ್ವಾದ-ಕ್ರಿಯೆಗಳಿಗೆ ದಾರಿಯಾಗಲಿ.
$0.30Original price was: $0.30.$0.27Current price is: $0.27.
ಳೆದ ಶತಮಾನದ ಎಪ್ಪತ್ತನೇ ದಶಕ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಸ್ಥಿತ್ಯಂತರ ಸಂದರ್ಭ. ಆ ಸಂದರ್ಭದಲ್ಲಿ ಪ್ರಭುತ್ವ, ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ, ರೈತ, ಕಾರ್ಮಿಕರ ಪರವಾಗಿ ಸ್ಪಂದಿಸುವಂತಾಗಲು ಸಮರ್ಥ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಅಂಥ ಪಾತ್ರವನ್ನು ನಿರ್ವಹಿಸಿದ ಕೆಲವೇ ಜನಪ್ರತಿನಿಧಿಗಳಲ್ಲಿ ಬಿ.ವಿ.ಕಕ್ಕಿಲ್ಲಾಯರೂ ಒಬ್ಬರು.
$3.00Original price was: $3.00.$2.70Current price is: $2.70.