ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ! ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ.
$0.24Original price was: $0.24.$0.22Current price is: $0.22.
ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ ನಾಯಕರಾದ ಯು. ಆರ್ ಅನಂತಮೂರ್ತಿ ಅವರ ಪರಿಚಯವನ್ನು ಟಿ. ಎಸ್. ಗೋಪಾಲ ಅವರ ಈ ಪುಸ್ತಕವು ಒಳಗೊಂಡಿದೆ.
$0.30Original price was: $0.30.$0.27Current price is: $0.27.
ಕೊರೋನ ವೈರಸ್ ಸೋಂಕಿನ ವಿವಿಧ ಆಯಾಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಲೇ ಇದ್ದ ಡಾ||ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ||ಬಾಲಸರಸ್ವತಿ ಅವರು ಈ ಬಗ್ಗೆ ಲಭ್ಯವಾಗಿರುವ ವೈಜ್ಞಾನಿಕವಾದ, ವಸ್ತುನಿಷ್ಠವಾದ ಮಾಹಿತಿಯನ್ನು ‘ಕೊರೋನ-ಹೆದರದಿರೋಣ’ ಎಂದು ಈ ಕೃತಿಯಲ್ಲಿ ಕನ್ನಡಿಗರಿಗೆ ಒದಗಿಸಿದ್ದಾರೆ.
$1.32Original price was: $1.32.$1.19Current price is: $1.19.
ಈ ಪುಸ್ತಕದಲ್ಲಿ ವಿಜ್ಞಾನಿಗಳ ಜೀವನ ಚಿತ್ರಣದೊಡನೆ ಅವರ ವೈಜ್ಞಾನಿಕ ಸಂಶೋಧನೆಯ ವಿವರಗಳನ್ನು ತಕ್ಕಮಟ್ಟಿಗೆ ಸರಳ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಯಾಕೆಂದರೆ ವಿಜ್ಞಾನಿಯೊಬ್ಬ ನಮಗೆ ಮುಖ್ಯವಾಗುವುದು ಆತನು ಮಾಡಿದ ಸಂಶೋಧನೆಯಿಂದ. ವಿಜ್ಞಾನಿಯ ಸಾಧನೆಯನ್ನು ಅರ್ಥಮಾಡಿಕೊಳ್ಳಲು ನೀವು ವಿಜ್ಞಾನದ ವಿದ್ಯಾರ್ಥಿಯಾಗಿರಬೇಕಿಲ್ಲ. ಇಂದು ಜನಸಾಮಾನ್ಯರಲ್ಲಿ ವೈಜ್ಞಾನಿಕ ಸಾಕ್ಷರತೆಯನ್ನು ಹರಡಬೇಕಾದ ಅಗತ್ಯವಿದೆ. ಆ ದಿಸೆಯಲ್ಲಿ ಇದೊಂದು ಸಣ್ಣ ಪ್ರಯತ್ನ.
-ಡಿ.ಆರ್.ಬಳೂರಗಿ
$1.62Original price was: $1.62.$1.46Current price is: $1.46.
ನೆಹರೂ, ಜಿನ್ನಾ, ಶೇಖ್ ಅಬ್ದುಲ್ಲರಿಂದ ಮೀನಾಕುಮಾರಿ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿವರೆಗೆ ಪ್ರಬಲರ, ಪ್ರಖ್ಯಾತರ, ಮನಮೋಹಕರ ಮತ್ತು ಸಿರಿವಂತರ ಜೊತೆಗಿನ ನೇರ ಮುಖಾಮುಖಿಯ ಬಿಚ್ಚುಮನಸ್ಸಿನ ವ್ಯಕ್ತಿಚಿತ್ರಣ ಪ್ರಸಿದ್ಧ ಪತ್ರಕರ್ತರೋರ್ವರ ಲೇಖನಿಯಿಂದ.
$1.32Original price was: $1.32.$1.19Current price is: $1.19.