ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.