• -40%

    ಸ್ವಪ್ನದರ್ಶಿ  ಮತ್ತು ಇತರ ಗೀತನಾಟಕಗಳು

    0

    ಸ್ವಪ್ನದರ್ಶಿ  ಮತ್ತು ಇತರ ಗೀತನಾಟಕಗಳು
    ಈ ನಾಟಕಗಳನ್ನು ಕೀರ್ತಿನಾಥ ಕುರ್ತಕೋಟಿ ಅವರು ರಚಿಸಿದ್ದಾರೆ. ಈ ಕೃತಿಯು ಸ್ವಪ್ನದರ್ಶಿ, ರಾಮಾವಸಾನ, ಮಹಾಪ್ರಸ್ಥಾನ, ಮಹಾಶ್ವೇತೆ, ಶೋಕವೃಕ್ಷ -ಈ ಐದು ನಾಟಕಗಳನ್ನು ಒಳಗೊಂಡಿದೆ.

    Original price was: $0.48.Current price is: $0.29.
    Add to cart
  • -42%

    ಆಮನಿ

    0

    ಆಮನಿ
    ಈ ನಾಟಕದಲ್ಲಿ ಮಹತ್ವವನ್ನು ವಾತಾವರಣ ಸೃಷ್ಟಿಗೆ ಕೊಟ್ಟಿದ್ದಾರೆ. ಅಂತಲೇ ಇಲ್ಲಿಯ ಕಥಾವಸ್ತುವಿನ ಇತಿಹಾಸ ದೂರ ಬಹುದೂರ ಓಡುತ್ತದೆ. ಕೃತಿಯ ಗಮನ ವರ್ತಮಾನಕಾಲದಿಂದ ಭೂತಕಾಲಕ್ಕೆ ಹೋಗಿ, ಆಮೇಲೆ ವರ್ತಮಾನದಿಂದ ಮುಂದುವರಿಯುತ್ತದೆ. ಇದು ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ ಆಟಗಳಲ್ಲಿ , ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಇಲ್ಲಿದೆ.

    Original price was: $0.24.Current price is: $0.14.
    Add to cart
  • -40%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ
    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.30.
    Add to cart
  • -40%

    ಶೋಕಚಕ್ರ

    0

    ಶೋಕಚಕ್ರ
    ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ  ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
    ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
    ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು.

    Original price was: $0.72.Current price is: $0.43.
    Add to cart
  • -40%

    ತೇಲಿ ಬಂದ ಎಲೆಗಳು

    0

    ತೇಲಿ ಬಂದ ಎಲೆಗಳು
    ದಿ. ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳುದಿಂಗಳಿನ ಹೂಬಾಣಗಳು’ ಗ್ರಂಥಮಾಲೆಯ ಹಳೆಯ ಚಂದಾದಾರರಿಗೆ ಬಹಳ ಮೆಚ್ಚುಗೆಯಾದ ಕೃತಿ. ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಗ-ಪ್ರಭಾಶಂಕರ-ಅವರ ಹತ್ತಿರವೇ ಇರುತ್ತಿದ್ದರು. ಮುಂಬಯಿ ಹಾಗೂ ಬೆಂಗಳೂರಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ  ಬಂದ ಲೇಖಕರ ಹಾಗೂ ಇತರ ಕಲಾವಿದರ ಜೊತೆಗಿನ ಅನುಭವಗಳನ್ನು ಬರೆದು ಇಟ್ಟಿದ್ದರು, ಅದನ್ನು ನಮಗೆ ಕಳಿಸುವ ಮೊದಲೇ ಅವರು ತೀರಿಕೊಂಡರು. ಅವರ ಮಗ-ಮಹೇಶ ಪಿ. ಪಡುಕೋಣೆಯವರು-ತಂದೆಯವರ ಹಸ್ತಪ್ರತಿಯನ್ನು ಶ್ರೀ ಜಯಂತ ಕಾಯ್ಕಿಣಿಯವರ ಮುಖಾಂತರ ಕಳುಹಿಸಿ, ಪ್ರಕಟಿಸಲು ಸಾಧ್ಯವೇ? ಎಂದು ಕೇಳಿದರು. ಗ್ರಂಥಮಾಲೆಯ ಚಂದಾದಾರರಿಗೆ ಈ ಕೃತಿಯನ್ನು ನೀಡಲು ಅತ್ಯಂತ  ಸಂತೋಷವೆನಿಸುತ್ತದೆ.

    Original price was: $0.72.Current price is: $0.43.
    Add to cart
  • -40%

    ಕಣ್ಣಾ ಮುಚ್ಚೆ…. ಕಾಡೇ ಗೂಡೇ….

    0

    ಬಿ ಜಯಶ್ರೀ ಅವರಂತಹ ಶಕ್ತಿಯನ್ನು, ಸ್ವಾಭಿಮಾನಿಯನ್ನು, ಪ್ರತಿಭೆಯನ್ನು ಅಕ್ಷರಗಳಲ್ಲಿ ಬಂಧಿಸುವುದಾದರೂ ಹೇಗೆ? ನಾನು ಈ ಸವಾಲಿಗೆ ಮುಖಾಮುಖಿಯಾದಾಗಲೆಲ್ಲ ನನಗೆ ದೊಡ್ಡ ಬೆಂಬಲ ಮತ್ತು ಬೆನ್ನು ಚಪ್ಪರಿಸುವಂಥಾ ನಂಬಿಕೆಯ ಮಾತುಗಳು ಬಂದದ್ದು ಸ್ವತಃ ಜಯಶ್ರೀ ಅವರಿಂದ.

    Original price was: $3.84.Current price is: $2.31.
    Add to cart
  • -40%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: $2.40.Current price is: $1.44.
    Add to cart
  • -40%

    ಸ್ಮೃತಿ ಸೌರಭ

    0

    ಸ್ಮ ತಿ ಸೌರಭ
    ಚೆನ್ನವೀರ ಕಣವಿ
    ಚೆನ್ನವೀರ ಕಣವಿಯವರು ಚಿತ್ರಿಸುವ ಯಾವುದೇ ವ್ಯಕ್ತಿಚಿತ್ರದಲ್ಲಿಯೂ ಕೊಂಕು, ವ್ಯಂಗ್ಯ, ಉಡಾಫೆಗಳಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಇತ್ಯಾತ್ಮಕ ಮತ್ತು ಆದರ್ಶದ ಗುಣಗಳನ್ನು ಅವರು ಕಂಡಿದ್ದಾರೆ. ಅವರಿಂದ ನಾಡು – ನುಡಿಗೆ ಸಂದ ಸೇವೆಯನ್ನು ಸ್ಮರಿಸಿದ್ದಾರೆ. ವ್ಯಕ್ತಿಯ ಇನ್ನೊಂದು ಮುಖವಾದ ದೌರ್ಬಲ್ಯಗಳನ್ನು, ಸಣ್ಣತನಗಳನ್ನು ಅವರು ಕೆಲಮಟ್ಟಿಗೆ ಉಪೇಕ್ಷೆಯಿಂದಲೇ ಕಂಡಿದ್ದಾರೆ. ಅಂತಹ ಸಾಧಕರ ಸಾಧನೆಯ ಮುಂದೆ ಇವಷ್ಟು ದೊಡ್ಡವಲ್ಲ ಹಾಗೂ ಎತ್ತಿ ಆಡುವವುಗಳಲ್ಲವೆಂದು ಅವರು ಭಾವಿಸಿದಂತೆ ತೋರುತ್ತದೆ. ಕಣವಿಯವರು ಇಂತಹ ವ್ಯಕ್ತಿಚಿತ್ರಗಳನ್ನು ಹಾಗೂ ನವ್ಯದ ಸಂದರ್ಭದಲ್ಲಿ ಪ್ರಕಟವಾದ ವ್ಯಕ್ತಿಚಿತ್ರವನ್ನು ಒಂದು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿದರೆ ಕಣವಿಯವರ ಕಣ್ಣಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದ ಮಹತ್ವ ಮತ್ತು ಗುಣಾತ್ಮಕತೆ – ನಿರ್ವಾಜ್ಯ – ಅಜಾತಶತ್ರುತನದ ಮನೋಭಾವ ಗಮನಕ್ಕೆ ಬರುತ್ತದೆ.
    ಆಧುನಿಕತೆ ಹಾಗೂ ಪರಂಪರೆಯ ಒಂದು ಹದವಾದ ಬೆಸುಗೆಯಂತಿರುವ ಕಣವಿಯವರ ಗದ್ಯಬರವಣಿಗೆಯ ವೈಶಿಷ್ಟ್ಯಕ್ಕೆ ಪ್ರಸ್ತುತ ಕೃತಿ ಒಂದು ನಿರ್ದೇಶನದಂತಿದೆ.

    Original price was: $1.44.Current price is: $0.86.
    Add to cart
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $4.32.
    Add to cart
  • -40%

    ಕೈಗೆ ಬಂದ ತುತ್ತು 

    0

    ಕೈಗೆ ಬಂದ ತುತ್ತು
    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: $3.00.Current price is: $1.80.
    Add to cart
  • -40%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $4.68.
    Add to cart
  • -40%

    ತೇರು

    0

    ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
    ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ.

    Original price was: $2.04.Current price is: $1.22.
    Add to cart