• -40%

    ನುಡಿ-ನಡೆ

    0
    Original price was: $1.44.Current price is: $0.86.
    Add to cart
  • -40%
  • -40%

    ಚಿಂತನಗಳು

    0
    Original price was: $1.32.Current price is: $0.79.
    Add to cart
  • -40%

    ಹದಿ ಹರೆಯದ ಕನಸುಗಳು

    0

    ನಮ್ಮ ಇಡೀ ಬದುಕಿನಲ್ಲಿ ಅತ್ಯಂತ ಸುಂದರವಾದ, ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಪ್ರಾಯ ಹದಿಹರೆಯ. ಹಾಗೇ ಎಲ್ಲವನ್ನೂ ತಿಳಿಯುವ ಕಲಿಯುವ ಪ್ರಾಯವೂ ಹೌದು. ಆ ಪ್ರಾಯದವರ ಮನಸ್ಸೂ ಚಂಚಲ. ಯಾವ ಕಡೆಗೂ ಬಾಗಬಹುದು. ಹದಿಹರೆಯ ಮತ್ತು ಯೌವನದ ಭಾವನೆಗಳಿಗೆ, ಅವರ ಕಷ್ಟ-ಸುಖಗಳಿಗೆ ಕಾರಣವಾಗುವ ಅಂಶಗಳ ಬಗೆ ಇಲ್ಲಿ ಪ್ರಸ್ತಾಪವಾಗಿದೆ. ಆ ಪ್ರಾಯದಲ್ಲಿ ಮನಸ್ಸು ಮತ್ತು ಶರೀರಗಳಲ್ಲಿ ಆಗುವ ವ್ಯತ್ಯಾಸ ಅಗಾಧ. ಬದುಕಿನ ಬೇರಾವ ಸಮಯದಲ್ಲೂ ಆಗದಷ್ಟು! ಪರಿಸರ, ಹುಟ್ಟುಗುಣ, ಶಿಕ್ಷಣಗಳು ಅವರ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಕೂಡ ಒಂದಿಷ್ಟು ಮಾಹಿತಿ ಇದರಲ್ಲಿ ಸಿಗಬಹುದು. ಯಾವ ರೀತಿಯ ಶಿಕ್ಷಣ ಸೂಕ್ತ? ಆಸಕ್ತಿ ಎಂದರೇನು? ಪ್ರೀತಿ ಪ್ರೇಮ ಎಂದರೇನು? ತಾವು ಯಾವ ರೀತಿ ವರ್ತಿಸಬೇಕು? ಎನ್ನುವುದೆಲ್ಲಾ ಆ ಪ್ರಾಯದಲ್ಲೇ ಅವರಿಗೆ ತಿಳಿದಿರಬೇಕು. ಅವರ ನಡವಳಿಕೆಗೆ ಕಾರಣಗಳು ಹೀಗಿರುತ್ತವೆ ಎನ್ನುವುದು ಹಿರಿಯರಿಗೂ ತಿಳಿದಿರಬೇಕು. ಹಾಗಿದ್ದರೆ ಮಾತ್ರ ಅವರ ಭಾವನೆಗಳಿಗೆ ಸ್ಪಂದಿಸಿ ಅವರೊಂದಿಗೆ ಸಂವಹನ ಸುಲಭವಾಗುತ್ತದೆ. ಇದರಲ್ಲಿ ತಜ್ಞರು ವ್ಯಕ್ತಪಡಿಸಿದ ವಿಚಾರಗಳ ಕ್ರೋಢೀಕರಣದ ಜೊತೆಗೆ ನನಗೆ ಕಂಡ ಸತ್ಯಗಳಿವೆ. ಹಾಗಾಗಿ ಇದು ಹಿರಿ-ಕಿರಿಯರೆಲ್ಲರಿಗೂ ಪ್ರಯೋಜನವಾಗಬಹುದು.

    ತಮ್ಮವ

    ಗಿರಿಮನೆ ಶ್ಯಾಮರಾವ್

    Original price was: $1.44.Current price is: $0.86.
    Add to cart
  • -40%

    ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-3

    0

    ಶ್ರೀ ಗಿರಿಮನೆ ಶ್ಯಾಮರಾವ್ ಅವರ ಚಿಂತನೆ, ಅನುಭವ, ಜೀವನ ಪ್ರೀತಿಯಿಂದ ಮೂಡಿಬಂದ ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಒಂದು ವಿಶಿಷ್ಟ ಕೃತಿ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಅವರು ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಅವರ ಪ್ರತಿಕ್ರಿಯೆಗಳು, ಭಾವನೆಗಳು, ಅವರ ತಪ್ಪು-ಒಪ್ಪು, ಸಾಮರ್ಥ್ಯ, ದೌರ್ಬಲ್ಯಗಳ ಅನಾವರಣ ಮಾಡಿದ್ದಾರೆ. ಮನುಷ್ಯರ ಗುಣ ಸ್ವಭಾವಗಳ ನೂರಾರು ವಿಷಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಕನ್ನಡಿ ಕೊಟ್ಟು ‘ನಿಮ್ಮ ಮುಖ ನೋಡಿಕೊಳ್ಳಿ, ನಿಮ್ಮ ಮಾತು-ವರ್ತನೆಯ ದರ್ಶನ ಮಾಡಿಕೊಳ್ಳಿ’ ಎಂದಿದ್ದಾರೆ. ‘ನಿಮ್ಮ ಡೊಂಕನ್ನು ನೀವೇ ತಿದ್ದಿಕೊಳ್ಳಿ’ ಎಂದು ಆಪ್ತ ಸ್ನೇಹಿತರಂತೆ ಬರೆದಿದ್ದಾರೆ. ಸ್ವಲ್ಪವೂ ಕಷ್ಟ-ಆಯಾಸ ಕೊಡದ ಬರವಣಿಗೆ. ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು, ವ್ಯಕ್ತಿತ್ವವನ್ನು ಸುಧಾರಿಸುವ ವಿಧಾನಗಳು. ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಪಾಲಕ, ಪೋಷಕ, ನಾಗರಿಕ  ಓದಬೇಕಾದ ಪುಸ್ತಕ. ಶ್ರೀ ಶ್ಯಾಮರಾವ್ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾನೆ. ಪುಸ್ತಕವನ್ನು ಓದಿದ ನೀವೂ ಅಭಿನಂದಿಸದೆ ಇರಲಾರಿರಿ.

    ಡಾ||ಸಿ.ಆರ್. ಚಂದ್ರಶೇಖರ್

    ಮನೋವೈದ್ಯರು

    ನಿಮ್ಹಾನ್ಸ್, ಬೆಂಗಳೂರು

    Original price was: $1.44.Current price is: $0.86.
    Add to cart
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-5

    0

    * ವೇದದ್ದೆಂದು ನಾವು ಮತ್ತೊಂದನ್ನು ಮಾಡುತ್ತಿದ್ದೇವೆ!
    * ಮಂತ್ರಗಳು ಎಂದರೆ ವಿಚಾರಗಳು ಎಂದರ್ಥ
    * ವೇದದಲ್ಲಿರುವುದು ವೈಜ್ಞಾನಿಕ ಮತ್ತು ವಾಸ್ತವದ ನೆಲೆಗ‍ಟ್ಟಿನ ಸಂಗತಿಗಳು
    * ವೇದ, ವೈರಾಗ್ಯ ಹೇಳುವುದಿಲ್ಲ ‘ಸದ್ಗೃಹಸ್ಥನಾಗು’ ಎನ್ನುತ್ತದೆ
    * ತಿಳಿಯದೆ ವೈಜ್ಞಾನಿಕವಾದ ವೇದಕ್ಕಿಂತ ಕಲ್ಪನೆಯ ಪುರಾಣಕ್ಕೆ ಒತ್ತುಕೊಟ್ಟಿದ್ದೇವೆ!
    * ವೇದ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ
    * ವ್ಯಕ್ತಿತ್ವ ವಿಕಸನದ ಎಲ್ಲಾ ಮಾದರಿಯ ಪಾಠ ಹೇಳುತ್ತದೆ ವೇದ
    * ವೇದದ ಭಾಷೆ ಮಾತ್ರ ಗಹನ; ವೇದವಿಚಾರ ಅತ್ಯಂತ ಸರಳ!
    ನಾವು ನಂಬಿದ್ದರಲ್ಲಿ ಗಟ್ಟಿಯೆಷ್ಟು? ಟೊಳ್ಳೆಷ್ಟು? ವೇದದೊಳಗೇನಿದೆ? ವೇದಮಂತ್ರಗಳ ಆಧಾರ, ಅರ್ಥದೊಂದಿಗೆ

    -ಗಿರಿಮನೆ ಶ್ಯಾಮರಾವ್

    Original price was: $0.60.Current price is: $0.36.
    Add to cart
  • -40%

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-4

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-3

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-2

    ವೇದಮಂತ್ರಗಳ ಅದ್ಭುತ ರಹಸ್ಯ-ಭಾಗ-1

    ಮಕ್ಕಳನ್ನು ಬೆಳೆಸುವುದು ಹೇಗೆ? ಭಾಗ-2

    0

    `ಮಕ್ಕಳನ್ನು ಹೇಗೋ ಬೆಳೆಸುವ ಬದಲು ಹೀಗೂ ಬೆಳೆಸಬಹುದು’ ಎನ್ನುವುದನ್ನು ಉದಾಹರಣೆಗಳ ಸಮೇತ ಲೇಖಕ ಗಿರಿಮನೆ ಶ್ಯಾಮರಾವ್ ಇಲ್ಲಿ ವಿವರಿಸಿದ್ದಾರೆ. ಇದರಲ್ಲಿ ಮಕ್ಕಳ ಅಭ್ಯುದಯಕ್ಕಾಗಿಯೇ ಬರೆದ ಸಣ್ಣ ಸಣ್ಣ ಅಧ್ಯಾಯಗಳಿವೆ. ಮಕ್ಕಳ ಬಗ್ಗೆ ಬರೆಯುವುದು ಸುಲಭವಲ್ಲ. ಆದರೆ ಇದರಲ್ಲಿ ಬರೆದ ಅಷ್ಟೂ ಅಧ್ಯಾಯಗಳ ಬಗ್ಗೆಯೂ ನನ್ನ ತಕರಾರಿಲ್ಲ. ಎಲ್ಲವೂ ಮಕ್ಕಳನ್ನು ಹೆತ್ತವರಿಗೆ ಅತ್ಯುಪಯುಕ್ತವಾದವುಗಳೇ. ಒಂದೇ ಸಲ ಓದಿ ಮುಗಿಸುವುದಕ್ಕಿಂತ ದಿನಕ್ಕೊಂದು ಅಧ್ಯಾಯದಂತೆ ಓದಿ ಮನನ ಮಾಡಿಕೊಳ್ಳುವುದು ಸೂಕ್ತ. ಮಕ್ಕಳಿಗೆ ಕತೆ ಯಾವ ರೀತಿ ಹೇಳಬಹುದು, ಕೆಲಸ ಹೇಗೆ ಕಲಿಸಬಹುದು, ಅವರ ತಪ್ಪುಗಳನ್ನು ಯಾವ ರೀತಿ ತಿದ್ದಿ ಅವರಿಗೆ ಹೇಗೆ ಮಾರ್ಗದರ್ಶನ ಮಾಡಬಹುದು, ಅವರೊಂದಿಗೆ ಹೇಗೆ ನಡೆದುಕೊಳ್ಳಬಹುದು’ ಎಂಬ ಬೇರೆ ಬೇರೆ ವಿಷಯಗಳ ಬಗ್ಗೆ ಅತ್ಯಂತ ಸರಳ ಮತ್ತು ಸುಲಭವಾಗಿ ಉದಾಹರಣೆಗಳ ಸಮೇತ ಪ್ರತಿಯೊಂದು ಅಧ್ಯಾಯದಲ್ಲೂ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ಇಂದಿನ ಬದುಕಲ್ಲಿ ಮಕ್ಕಳನ್ನು ಅರಿಯಲು ಹೆತ್ತವರಿಗೆ ತೀರಾ ಅವಶ್ಯವಾದ ಪುಸ್ತಕ ಇದು…
    ಡಾ|| ನಾ. ಸೋಮೇಶ್ವರ
    (ಖ್ಯಾತ ವೈದ್ಯಕೀಯ ಬರಹಗಾರರು)

    Original price was: $1.20.Current price is: $0.72.
    Add to cart
  • -40%

    ಹೇಮಾವತಿ ತೀರದ ಕೌತುಕ ಕತೆಗಳು

    0

    ಇದು ಸಾವಿರದ ಒಂಭೈನೂರಾ ತೊಂಭತ್ತರ ದಶಕದ ಆಚೀಚೆ ಹುಟ್ಟೂರಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲಿ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ಮಲೆನಾಡಿನ ರೋಚಕ ಕತೆಗಳ ಮತ್ತೊಂದು ಭಾಗ.
    ನಮ್ಮ ಸುತ್ತ-ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟಿದ್ದು, ಪಡದಿರುವುದು ಎರಡೂ ಇರುತ್ತದೆ.
    ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ-ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟಿದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ಬಾಧಿಸುತ್ತವೆ; ನಲಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಅಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಅವರವರ ಕಷ್ಟ-ಸುಖಗಳ ಅನುಭವ ಎಂಥಾದ್ದು? ಎನ್ನುವುದನ್ನು ಅರ್ಥಮಾಡಿಕೊಂಡು ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿಸಲು ಶಕ್ತನಾಗುವ ಬರಹಗಾರ ಓದುಗರ ಮನ ಗೆಲ್ಲುತ್ತಾನೆ.
    ಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣೆಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಓದುಗರ ಮನ ಮುಟ್ಟಿದರೆ ಧನ್ಯತೆಯ ಭಾವ ನನ್ನದು. ಮಲೆನಾಡಿನ ರೋಚಕ ಕತೆಗಳ ಸರಣಿಗೆ, ಅಭೂತ ಪೂರ್ವ ಯಶಸ್ಸಿಗೆ, ರೋಚಕ ಮುನ್ನಡೆ ನೀಡಿ ಸಹಕರಿಸಿದ, ಸಹಕರಿಸುತ್ತಿರುವ ಎಲ್ಲರಿಗೂ ಈ ಕೃತಿ ಸಮರ್ಪಣೆ.
    ಇಂತೀ ನಿಮ್ಮವ
    ಗಿರಿಮನೆ ಶ್ಯಾಮರಾವ್

    Original price was: $2.16.Current price is: $1.30.
    Add to cart