ಕಳೆದ ಇಪ್ಪತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿರುವ, ಅಲ್ಲಿಯ ಸಂಸೃತಿ ಸಂಪ್ರದಾಯಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ, ಸ್ಪ್ಯಾನಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲ ರಂಗಸ್ವಾಮಿ ಮೂಕನಹಳ್ಳಿ, ತಾನು ನೋಡಿದ, ಓಡಾಡಿದ ಒಟ್ಟು ಹತ್ತು ದೇಶಗಳನ್ನು ಇಲ್ಲಿ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಸ್ಪೇನ್, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್, ಮಲೇಷ್ಯನಂಥ ಹೆಸರುವಾಸಿ ದೇಶಗಳ ಜೊತೆಗೇ ಲಿಚನ್ ಸ್ಟೈನ್, ಅಂದೋರ, ಪೋರ್ಚುಗಲ್ ನಂಥ ವಿಶಿಷ್ಟ ದೇಶಗಳ ಬಗ್ಗೆಯೊ ಇಲ್ಲಿ ಅಪರೂಪದ ಮಾಹಿತಿ ಕಣಜವೇ ಇದೆ . ಪ್ರತಿ ದೇಶದ ಕುರಿತೊ ವಿಡಿಯೋಗಳಿವೆ . ಆಯಾ ದೇಶದ ಪ್ರವಾಸ ಮಾಡಲು ಬೇಕಾದ ಅತ್ಯಗತ್ಯ ಮಾಹಿತಿಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಪ್ರತಿ ಪುಟದಲ್ಲೂ ಆ ದೇಶಗಳಿಗೆ ಸಂಬಂಧಿಸಿದ ವಿಶಿಷ್ಟ ಒನ್ ಲೈನರ್ಸ್ ಇವೆ. ಸೂಕ್ತ ಚಿತ್ರಗಳು ಅಲ್ಲಲ್ಲಿ ಬಂದಿವೆ. ಪ್ರವಾಸ ಹೊರಡುವವರು ಗಮನಿಸಲೇಬೇಕಾದ ಅೆಂಶಗಳ ಬಗ್ಗೆ ಸ್ವತಃ ಲೇಖಕರೇ ವಿಡಿಯೋ ಮಾಡಿದ್ದಾರೆ . ಒಟ್ಟಾರೆಯಾಗಿ ಇದು ಪ್ರವಾಸ ಕಥನವಷ್ಟೇ ಅಲ್ಲ, ಪ್ರವಾಸಿ ಗೈಡ್ ಕೂಡ ಹೌದು. ಓದಬಹುದಾದ, ನೋಡಬಹುದಾದ ಆಧುನಿಕ ಪುಸ್ತಕ ಇದು.