• -40%

    ಕಾಡು ಮಲ್ಲಿಗೆ

    0

    ಕಾಡು ಮಲ್ಲಿಗೆ
    ೧೯೮೪ರಲ್ಲಿ ವ್ಯಾಸರಾಯ ಬಲ್ಲಾಳರ ಕೃತಿಗಳನ್ನು ಕುರಿತ ವಿಚಾರ ಸಂಕಿರಣ ನಡೆದಾಗ ಈ ನಾಟಕವನ್ನು ಸಿದ್ಧಪಡಿಸಲಾಯಿತು.
    “ಟೆರೇಸ್ ಥಿಯೇಟರ್” ಎಂಬ ಆಲೋಚನೆಯಡಿಯಲ್ಲಿ ಕಲಾಮಂದಿರದ ಮಹಡಿಯ ಮೇಲೆ ಮೊದಲ ಪ್ರಯೋಗವನ್ನು ಬಿ.ಸುರೇಶ ನಿರ್ದೇಶನದಲ್ಲಿ ಚಿತ್ರಾ ತಂಡದ ಗೆಳೆಯರು ಅಭಿನಯಿಸಿದರು. ಬೆಂಗಳೂರು ದೂರದರ್ಶನದ ಮೂಲಕ ೧೯೯೧ರಲ್ಲಿ ನಾಟಕವು ಪ್ರಸಾರವಾಯಿತು.
    ಈ ನಾಟಕ ಕತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳದ್ದು ಸುಮಾರು ೧೯೫೦ರ ಆಸುಪಾಸು. ಆದರೆ ೧೯೭೦ರ ದಶಕದ ಭರತರಾಜ್ ಸಿಂಗ್ ಅವರ ವಿವರವೂ ಮಾತಾಗಿ ನಾಟಕದಲ್ಲಿ ಬರುತ್ತದೆ.
    ಹೀಗೆ ‘ಕಾಲ’ವನ್ನು ಹಾರುವುದು ವಿಮರ್ಶಾ ಮಾನ್ಯವಲ್ಲ, ಆದರೆ ಕಷ್ಟವಲ್ಲ. ಅಭಿನಯಿಸುವವರಿಗೆ ಎದುರಿಗೆ ಕೂತವರು ಪ್ರಬುದ್ಧರು ಎಂಬ ನಂಬಿಕೆ ಇದ್ದರೆ ಸಾಕು.
    ಹೀಗೆಯೇ ೧೯೬೦ರ ದಶಕದ ಮಿಲ್ಲುಗಳ ಮುಷ್ಕರ ಹಾಗೂ ಗೋಲಿಬಾರು ಸಹ ಈ ನಾಟಕದೊಳಗೆ ಪ್ರಸ್ತಾಪವಾಗುತ್ತದೆ. ಈ ‘ಕಾಲೋಲ್ಲಂಘನ” ಕಥನ ಕಾರಣಕ್ಕಾಗಿ ಮಾತ್ರ ಆಗಿದೆ.

    Original price was: $0.84.Current price is: $0.50.
    Add to basket
  • -40%

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

    0

    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
    ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಪುಸ್ತಕವು ಬೆಟ್ಟದ ತಪ್ಪಲ ಮಾರಿಯಾದ ಹುಲಿಯನ್ನು ಮನೆಗೆ ತಂದು, ಅದು ಪಾಪ ರೂಪದ ಬೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರಲಾಗಿ, ಅದರ ಜೀವನವನ್ನು ದುರಂತದಲ್ಲಿ ಅಂತ್ಯಗೊಳಿಸಿದ ಘಟನೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಈಡೊಂದು ಹುಲಿಯೆರಡು 

    0

    ಈಡೊಂದು ಹುಲಿಯೆರಡು
    ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket
  • -40%

    ರಕ್ತಚಂದನ

    0

    ರಕ್ತಚಂದನ

    …..ಒಂದು ವೈವಿಧ್ಯಮಯ ಕಥಾ ಸಂಕಲನ

    ಹನ್ನೆರಡು ಕಥೆಗಳ ಹೂರಣ…
    ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ ಮತ್ತು ತುಷಾರದಲ್ಲಿ ಪ್ರಕಟಿತ ಸಾಮಾಜಿಕ ಮತ್ತು ಪತ್ತೇದಾರಿ ಕತೆಗಳ ಸಂಕಲನ

    Original price was: $1.92.Current price is: $1.15.
    Add to basket
  • -40%

    ನಾಳೆಯನ್ನು ಗೆದ್ದವನು

    0

    ನಾಳೆಯನ್ನು ಗೆದ್ದವನು
    ಅಭಿಮನ್ಯು ಎಂಬ ಇಂಟೆಲಿಜೆನ್ಸ್ ಉಪ ನಿರ್ದೇಶಕನನ್ನು ಅನ್ಯಗ್ರಹ ಜೀವಿಗಳು ತಮ್ಮ ನೌಕೆಗೆ ಕದ್ದೊಯ್ದು ಕಾಲಮಾನದ ರಹಸ್ಯ, ಅಂತರಿಕ್ಷದ ಗುಪ್ತ ಮತ್ತು ಅನೂಹ್ಯ ಸಂಗತಿಗಳನ್ನು ತೆರೆದಿಡುತ್ತದೆ…ಆದರೆ ಈ ಪರಮಸಶಕ್ತ ಮತ್ತು ಮುಂದುವರೆದ ಜೀವಿಗಳು ಭೂಮಿಯಲ್ಲಿನ ಮುಂದೆ ನಡೆಯುವ ದೊಡ್ಡ ಅನಾಹುತ ತಡೆಯಲು ಅಭಿಮನ್ಯುವಿನ ಸಹಾಯ ಬೇಡುತ್ತವೆ.. ಅಭಿಮನ್ಯುವಿನ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕರ ಮಿಶನ್ ಇದಾಗುತ್ತದೆ. ಭೂತ, ವರ್ತಮಾನ, ಭವಿಷ್ಯ ಕಾಲಗಳ ಹಿನ್ನೆಲೆಯ ವೈಜ್ಞಾನಿಕ ಥ್ರಿಲ್ಲರ್!

    Original price was: $0.83.Current price is: $0.50.
    Add to basket
  • -20%

    ಸಮಸ್ತ ಕಥೆಗಳು

    0
    Original price was: $5.76.Current price is: $4.61.
    Add to basket
  • -40%

    ಬೆಳೆವ ಸಿರಿ ಮೊಳಕೆಯಲ್ಲಿ

    0

    ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
    -ಹ. ಶಿ. ಭೈರನಟ್ಟಿ

    Original price was: $0.48.Current price is: $0.29.
    Add to basket