ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ವಶಾಸ್ತ್ರ ಪ್ರಮೇಯ ಆಗರ” ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಬಯಲುಮಾಡುತ್ತಾರೆ.