ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾನೆ.