ಸರಕಿನ ಉತ್ಪಾದನೆ ಮತ್ತು ಬಳಕೆಯ ಕಾರಣಕ್ಕಾಗಿಯೇ ಸಾಮಾಜಿಕ ಸಂಬಂಧಗಳು ಏರ್ಪಡುತ್ತವೆ. ಇದು ಸಮಾಜ ರಚನೆಯ ಅತ್ಯಂತ ಮುಖ್ಯವಾದ ಬೀಜರೂಪಿ ಕಾರಣ. ಇದನ್ನು ಸರಿಯಾದ ವಿಧಾನದಲ್ಲಿ ಅರ್ಥಮಾಡಿಕೊಂಡರೆ ಆಗ ಇಡೀ ಸಮಾಜದ ದೇಹ, ದೇಹದ ಇತರೆ ಅಂಗಗಳು ಹಾಗೂ ಅದರ ಭಾವ, ಭಾವದ ಇತರೆ ಸ್ತರಗಳು ಇವು ಅರ್ಥವಾಗುತ್ತವೆ. ಆಗ ಸಮಾಜದ ಅಧ್ಯಯನ ಸಮಗ್ರವಾಗುತ್ತದೆ; ಪೂರ್ಣವಾಗುತ್ತದೆ. ಈ ಅಂಶವನ್ನು ಕಾರ್ಲ್ ಮಾರ್ಕ್ಸ್ ಅವರು ಈ ಮಹಾನ್ ಗ್ರಂಥದಲ್ಲಿ ಅತ್ಯಂತ ಖಚಿತವಾಗಿ ಅಧ್ಯಯನ ಮಾಡಿದ್ದಾರೆ, ಚರ್ಚಿಸಿದ್ದಾರೆ ಹಾಗೂ
ವ್ಯಾಖ್ಯಾನಿಸಿದ್ದಾರೆ.