- -40%
ಜನನಾಯಕ -ಡಿ. ಕೆ. ನಾಯ್ಕರ್
0Original price was: ₹250.00.₹150.00Current price is: ₹150.00.ಜನನಾಯಕ –ಡಿ. ಕೆ. ನಾಯ್ಕರ್
ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. - -40%
ಅದ್ದ್ಯಾ
0Original price was: ₹100.00.₹60.00Current price is: ₹60.00.ಅದ್ದ್ಯಾ
ಅದ್ದ್ಯಾ ಎಂಬ ನಾಮನಿರ್ದೇಶನಗಳಿಲ್ಲದ ವ್ಯಕ್ತಿಯು ತನ್ನದಲ್ಲದ ಬೇರೆಯವರ ಮನೆಯಲ್ಲಿ ಬದುಕಿ ಆ ಮನೆಯ ಸುಃಖ ದುಃಖಗಳಲ್ಲಿ ತಾನೂ ಭಾಗಿಯಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಆ ಮನೆಯ ಮಕ್ಕಳಿಗೆ ಕಲಿಸಿ ಅವರ ಜೀವನವನ್ನು ರೂಪಿಸಿದ ಚಿತ್ರ. ತಾನು ಸಮರ್ಪಿಸಿಕೊಂಡ ಮನೆಗೆ ತನ್ನನ್ನು ಸೀಮಿತಗೊಳಿಸಿಕೊಂಡು ಮನೆಯ ಸಂಸ್ಕೃತಿಗೆ ತಾನೂ ಭಾಗೀದಾರಳಾಗಿ ಅದಕ್ಕೆ ತನ್ನ ಕೊಡುಗೆಯನ್ನು ಇತ್ತವಳು ಈ ಅದ್ದ್ಯಾ. ಅದ್ದ್ಯಾ ತನ್ನ ಮೇರೆಯಲ್ಲಿನ ಸಮಾಜದ ಭಾಷೆ ನೀತಿ ನಿಲುವುಗಳನ್ನು ನಿರ್ದೇಶಿಸುವ ಜೀವ. ಆದ್ದರಿಂದ ಇದು ಒಮ್ಮೆ ನಾವು ಕಳಕೊಂಡ ತಿರುಗಿ ಮರಳಿ ಬಾರದ ಸಂಸ್ಕೃತಿಯ ಚಿತ್ರವೆಂದರೂ ಸರಿ. - -40%
ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು
0Original price was: ₹150.00.₹90.00Current price is: ₹90.00.ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ.
ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ.
ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ.
- -40%
ಗೋರಾ
0Original price was: ₹30.00.₹18.00Current price is: ₹18.00.ಗೋರಾ
(ಜೀವನ ಚರಿತ್ರೆ)
ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು ತಿರಸ್ಕ್ರತ ದೃಷ್ಟಿಯಿಂದ ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.