ಯಾವ ಸ್ಕೂಲು, ಕಾಲೇಜುಗಳಲ್ಲಿಯೂ ಬೋಧಿಸದಂತಹ ಸಂಸ್ಕೃತಿ, ಸಂಸ್ಕಾರವನ್ನು ಅದು ಹೇಗೆ ಮೈಗೂಡಿಸಿಕೊಂಡು ನನ್ನವಳು ಬೆಳೆದಳೋ! ಬಹುಶಃ ಅವಳ ವಂಶಸ್ಥರಿಂದ ಹರಿದು ಬಂದಿರುವ ಸಂಸ್ಕಾರದ ಫಲ. ಮದುವೆಯಾಗಿ ಬಂದಂದಿನಿಂದಲೂ ತನ್ನ ಸಂಸಾರ, ತಂದೆ ತಾಯಿಗಳು (ಅಂದರೆ ನನ್ನ ತಂದೆ ತಾಯಿಗಳು) ಮಕ್ಕಳು, ಮೊಮ್ಮಕ್ಕಳಂತೆ ಇತರರ ಬಗ್ಗೆಯೂ ಇದೇ ಕಾಳಜಿ ತೋರುತ್ತಾ ಬಂದ ನನ್ನವಳಿಗೆ ನಮ್ಮ ಕುಟುಂಬದಿಂದ ದೊರೆತದ್ದಕ್ಕಿಂತ ತೆತ್ತುಕೊಂಡದ್ದೆ ಜಾಸ್ತಿ.
ಇದೊಂದು ಋಣ ಸಂದಾಯ ಮಾರ್ಗದ ಪ್ರತಿಫಲನದ ಫಲ ಈ ಪುಸ್ತಕವೇ ಹೊರತು ಪ್ರಸಿದ್ಧಿಗಾಗಿ ಬರೆದ ಕೃತಿಯಲ್ಲ.