• -40%

    ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು

    0

    ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು
    (ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )
    ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ.  ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ.   ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ.  ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
    ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ.  ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ.  ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.

    Original price was: $1.08.Current price is: $0.65.
    Add to basket
  • -40%

    ಸುಖ ಯಾರ ಸೊತ್ತು?

    0

    ಸುಖ ಯಾರ ಸೊತ್ತು?
    (ವ್ಯಕ್ತಿತ್ವ ವಿಕಸನ)
    ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್!

    Original price was: $1.20.Current price is: $0.72.
    Add to basket
  • -40%

    ಓಡಬೇಡ ಎದುರಿಸು…

    0

    ಓಡಬೇಡ ಎದುರಿಸು…
    ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
    ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ.

    Original price was: $1.32.Current price is: $0.79.
    Add to basket
  • -42%

    ಕುಶಲೋಪರಿ

    0

    ಕುಶಲೋಪರಿ
    ಶರತ್ ಎಚ್.ಕೆ.
    ‘ಕುಶಲೋಪರಿ’ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ.  ಲೇಖಕರ  ಕಿವಿಗೆ ಬಿದ್ದ ಹಾಗೂ ಸ್ವತಃ ಲೇಖಕರೇ  ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ.

    Original price was: $0.24.Current price is: $0.14.
    Add to basket
  • -40%

    ಮನೋನಂದನ

    0

    ಮನೋನಂದನ
    ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
    ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.

    Original price was: $1.98.Current price is: $1.19.
    Add to basket
  • -40%

    ಜ್ಞಾನವೃಕ್ಷ

    0

    ಜ್ಞಾನವೃಕ್ಷ
    (ಜೀವನ ಮತ್ತು ಬದುಕು)
    ಜೀವನ ಸಹಜ ಪ್ರಕೃತಿಯಾದರೆ ಬದುಕು ಸಂಸ್ಕಾರದಿಂದ ರೂಪುಗೊಂಡ ಪ್ರತಿಮೆ. ಧಾರ್ಮಿಕ,  ಸಾಮಾಜಿಕ, ವೈಜ್ಞಾನಿಕ, ಭೌತಿಕವೇ ಮೊದಲಾದ ಅನೇಕ ವಿಷಯಗಳನ್ನು ಕೈಗೆತ್ತಿಕೊಂಡು ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್, ಸಿಖ್, ಪಾರ್ಸಿ ಮುಂತಾದ ಜನಾಂಗಗಳಿಗೆ ಸಂಬಂಧಿಸಿದ ಗ್ರಂಥಗಳ ಜೊತೆಗೆ ತುಲನಾತ್ಮಕ ಅಧ್ಯಯನದಿಂದ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಬಹುಮುಖ ಅಧ್ಯಯನ ಇಂದಿನ ಸಮಾಜಕ್ಕೆ ಬದುಕಿನ ಕನ್ನಡಿಯಾಗಿ ಬಾಳಿನ ಮುನ್ನುಡಿಯಾಗಿ ಓದುಗರನ್ನು ಮುನ್ನಡೆಸಲು ಸಹಾಯಕವಾಗಿದೆ.  ‘ಉಪವಾಸದ ಹಿನ್ನೆಲೆಯಲ್ಲಿ ಏಕಾದಶಿಯ ಮಹತ್ವ’ವನ್ನು ನಾನಾ ಬಗೆಯಾಗಿ ವಿಶ್ಲೇಷಿಸಿದ್ದಾರೆ.

    Original price was: $1.30.Current price is: $0.78.
    Add to basket
  • -40%

    ಭಾಷೆ ಮತ್ತು ಸಂಸ್ಕೃತಿ

    0

    ಭಾಷೆ ಮತ್ತು ಸಂಸ್ಕೃತಿ
    ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.

    Original price was: $1.80.Current price is: $1.08.
    Add to basket
  • -40%

    ಮೊದಲ ತೊದಲು

    0

    ಮೊದಲ ತೊದಲು
    ಈ ಕೃತಿಯನ್ನು ಶರತ್ ಎಚ್.ಕೆ. ಅವರು ಬರೆದಿದ್ದಾರೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: $0.96.Current price is: $0.58.
    Add to basket
  • -40%

    ಆಗೊಮ್ಮೆ ಈಗೊಮ್ಮೆ

    0

    ಆಗೊಮ್ಮೆ ಈಗೊಮ್ಮೆ

    (ಗದ್ಯ ಲೇಖನಗಳ ಸಂಗ್ರಹ)

    ಇದೊಂದು ಭಾಷಣಗಳು, ಲೇಖನಗಳು ಮತ್ತು ವ್ಯಕ್ತಿ ಚಿತ್ರಗಳ ಸಂಕಲನ. ಇದರಲ್ಲಿ ಗಿರೀಶ ಕಾರ್ನಾಡ ಅವರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ ಮಾಡಿದ 11 ಭಾಷಣಗಳು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಮತ್ತು 6 ವ್ಯಕ್ತಿಚಿತ್ರಗಳು ಸೇರಿವೆ.

    Original price was: $2.40.Current price is: $1.44.
    Add to basket