• -10%

    ಸಣ್ಣ ಸಂಗತಿ

    0

    ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೆಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ.

    Original price was: $1.80.Current price is: $1.62.
    Add to basket
  • -10%

    ಫ್ರಾನ್ಸ್ ನಲ್ಲಿ ಅಂತರ್ಯುದ್ಧ

    0

    ಪ್ಯಾರಿಸ್ಸಿನ ಕಾರ್ಮಿಕರು ೧೮೭೧ರ ಮಾರ್ಚ್ ೧೮ರಂದು ತಮ್ಮ ನಗರವನ್ನು ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, ೧೦ ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. “ಪ್ಯಾರಿಸ್ ಕಮ್ಯೂನ್” ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಅದರೂ ಅದು ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್ ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ ೭೨ ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾರ್ಕ್ಸ್-ಏಂಗೆಲ್ಸ್ ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು.

    Original price was: $0.96.Current price is: $0.86.
    Add to basket
  • -10%

    ಜಿನ್ನಾರಿಂದ ಮೋದಿವರೆಗೆ

    0

    ನೆಹರೂ, ಜಿನ್ನಾ, ಶೇಖ್ ಅಬ್ದುಲ್ಲರಿಂದ ಮೀನಾಕುಮಾರಿ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿವರೆಗೆ ಪ್ರಬಲರ, ಪ್ರಖ್ಯಾತರ, ಮನಮೋಹಕರ ಮತ್ತು ಸಿರಿವಂತರ ಜೊತೆಗಿನ ನೇರ ಮುಖಾಮುಖಿಯ ಬಿಚ್ಚುಮನಸ್ಸಿನ ವ್ಯಕ್ತಿಚಿತ್ರಣ ಪ್ರಸಿದ್ಧ ಪತ್ರಕರ್ತರೋರ್ವರ ಲೇಖನಿಯಿಂದ.

    Original price was: $1.32.Current price is: $1.19.
    Add to basket
  • -10%

    ಯಾವ ಜನ್ಮದ ಮೈತ್ರಿ

    0

    ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕೃತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.

    Original price was: $2.10.Current price is: $1.89.
    Add to basket
  • -10%

    ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ

    0

    ವಿವಿಧ ಸ್ಪರ್ಧಾತ್ಮಕ  ಪರೀಕ್ಷೆಗಳ ಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ  ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ  ವಿವರಿಸಲಾಗಿದೆ.

    Original price was: $1.50.Current price is: $1.35.
    Add to basket
  • -10%

    ಸೋಲೆಂಬುದು ಅಲ್ಪವಿರಾಮ

    0

    ನೇಮಿಚಂದ್ರ ಅವರ ಈ ಪುಸ್ತಕವು ಬದುಕು ಬದಲಿಸೋಣ, ಸೋಲನ್ನು ಸವಾಲು ಅಂಥಾ ತಿಳಿಯೋಣ  ಎಂಬ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೃತಿ ಇದಾಗಿದೆ.

    Original price was: $2.40.Current price is: $2.16.
    Add to basket
  • -10%

    ಸಂತಸ -ನನ್ನೆದೆಯ ಹಾಡು ಹಕ್ಕಿ

    0

    ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲಿವೆ.

    Original price was: $2.40.Current price is: $2.16.
    Add to basket
  • -10%

    ಸಾವೇ ಬರುವುದಿದ್ದರೆ ನಾಳೆ ಬಾ

    0

    ಈ ಪುಸ್ತಕವು ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಭರವಸೆಯ ಲೇಖನಗಳನ್ನು ಹೊಂದಿದೆ.

    Original price was: $2.40.Current price is: $2.16.
    Add to basket
  • -10%

    ಮುದ್ರಕನ ಸಾಹಿತ್ಯ ನಂಟು

    0

    ಮುದ್ರಕನಾಗಿ ನಾನು ಪಡೆದ ಅನುಭವಗಳನ್ನು, ನನ್ನ ನೆನಪಿನ ಆಳದಲ್ಲಿ ಉಳಿದಿರುವಂಥವನ್ನು, ವ್ಯಕ್ತಿಚಿತ್ರಗಳಾಗಿ ಬಿಡಿಸಿರುವುದೇ ಇಲ್ಲಿನ ಚಿತ್ರಣಗಳ ಸಾರಸಂಪತ್ತು.
    -ಶೇಷನಾರಾಯಣ

    Original price was: $1.20.Current price is: $1.08.
    Add to basket
  • -10%

    ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು

    0

    ಈ ಪುಸ್ತಕವು  ನಿಸರ್ಗ ನಿರ್ಮಿತ  ಅದ್ಭುತಗಳನ್ನು  ತೆರೆದಿಡುವ ಕೃತಿಯಾಗಿದೆ.

    Original price was: $0.78.Current price is: $0.70.
    Add to basket
  • -10%

    ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ

    0

    ಳೆದ ಶತಮಾನದ ಎಪ್ಪತ್ತನೇ ದಶಕ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಸ್ಥಿತ್ಯಂತರ ಸಂದರ್ಭ. ಆ ಸಂದರ್ಭದಲ್ಲಿ ಪ್ರಭುತ್ವ, ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ, ರೈತ, ಕಾರ್ಮಿಕರ ಪರವಾಗಿ ಸ್ಪಂದಿಸುವಂತಾಗಲು ಸಮರ್ಥ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಅಂಥ ಪಾತ್ರವನ್ನು ನಿರ್ವಹಿಸಿದ ಕೆಲವೇ ಜನಪ್ರತಿನಿಧಿಗಳಲ್ಲಿ ಬಿ.ವಿ.ಕಕ್ಕಿಲ್ಲಾಯರೂ ಒಬ್ಬರು.

    Original price was: $3.00.Current price is: $2.70.
    Add to basket
  • -10%

    ಕನ್ನಡ ಭಾಷೆ-ಬದುಕು

    0

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಾಧ್ಯಮಗಳ ಸಮಸ್ಯೆ, ಇಂಗ್ಲಿಷ್ ಭಾಷೆಯ ಪ್ರಭುತ್ವದ ಸಮಸ್ಯೆ, ಆಡಳಿತದಲ್ಲಿ ಕನ್ನಡ ಬಳಕೆಯಾಗಲೇಬೇಕಾದ ಅಗತ್ಯ, ಹಿಂದೀ ಹೇರಿಕೆಯ ಪ್ರಯತ್ನಗಳು, ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳು, ಸರಕಾರೀ ಶಾಲೆಗಳ ಸಬಲೀಕರಣ, ಗಡಿಭಾಗದ ಭಾಷಾ ಸಮಸ್ಯೆಗಳು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗಳ ಸ್ಥಾನ-ಮಾನ, ಜಾನಪದ ಪದಕೋಶದ ಅಗತ್ಯ, ಕನ್ನಡ ಅಸ್ಮಿತೆಯ ನೆಲೆಗಳು, ಕನ್ನಡದ ಭವಿಷ್ಯ-ಹೀಗೆ ಅನೇಕ ವಿಷಯಗಳ ಕುರಿತು ಈ ಪುಟ್ಟ ಪುಸ್ತಕ ಬೆಳಕು ಚೆಲ್ಲುತ್ತದೆ.

    Original price was: $1.20.Current price is: $1.08.
    Add to basket