Paa Vem Acharya

Paa Vem Acharya

ಲಾಂಗೂಲಾಚಾರ್ಯರೆಂದು ಖ್ಯಾತರಾದ ಪಾಡಿಗಾರು ವೆಂಕಟರಮಣ ಆಚಾರ್ಯರು ಕನ್ನಡದ ಸಾಹಿತಿಗಳಲ್ಲೊಬ್ಬರು. ೧೯೧೫ ಫೆಬ್ರುವರಿ ೬ ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಎಸ್.ಎಸ್.ಸಿ ವರೆಗೆ ಶಿಕ್ಷಣ ಪಡೆದರು. ಆದರೆ ಹಣದ ಅಭಾವದಿಂದಾಗಿ ಶಿಕ್ಷಣ ಮುಂದುವರೆಸಲಾಗಲಿಲ್ಲ. ಉಡುಪಿಯಲ್ಲಿಯೆ ಶಾಲಾ ಮಾಸ್ತರಿಕೆ, ಮುದ್ರಣ ಕೆಲಸ, ಅಂಗಡಿಯಲ್ಲಿ ಲೆಕ್ಕ ಇಡುವದು ಮೊದಲಾದ ಕೆಲಸಗಳನ್ನು ಮಾಡಿದರು. ಆಗಿನ ಪ್ರಸಿದ್ಧ ಪತ್ರಿಕೆ ಅಂತರಂಗದ ಸಹಸಂಪಾದಕರಾಗಿ ಕೆಲಕಾಲ ದುಡಿದರು.ಪಾವೆಂ ಅವರ ಒಟ್ಟು ಬರವಣಿಗೆ ಹತ್ತು ಸಾವಿರ ಪುಟಗಳನ್ನು ಮೀರುವುದಾದರೂ,ಪುಸ್ತಕ ರೂಪದಲ್ಲಿ ಬಂದಿದ್ದು ತೀರಾ ಕಡಿಮೆ. ಪಾವೆಂ ಅವರ ಮೊದಲ ಕವನ ಉದ್ಗಾರ ೧೯೩೩ ರಲ್ಲಿ ಜಯಕರ್ನಾಟಕಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಮೊದಲ ಸಣ್ಣ ಕತೆ ೧೯೩೫ ರಲ್ಲಿ ಮಧುವನ ಎಂಬ ಕಥಾಸಂಗ್ರಹದಲ್ಲಿ ಪ್ರಕಟವಾಗಿದೆ. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ, ತುಷಾರ, ತರಂಗ, ಸುಗುಣಮಾಲಾ ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.

Books By Paa Vem Acharya