ಪಿ.ಲಂಕೇಶ್ ಇವರು ಮಾರ್ಚ್ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗೆಯಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ.(ಆನರ್ಸ್) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.ಪಿ.ಲಂಕೇಶ್, ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.[೧] ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ.’ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’, ‘ಕಲ್ಲು ಕರಗುವ ಸಮಯ’, ’ಉಲ್ಲಂಘನೆ’, ’ಮಂಜು ಕವಿದ ಸಂಜೆ’ ಪ್ರಕಟಿತ ಕಥಾ ಸಂಕಲನಗಳು, ವಾಮನ’ (1958) ಇವರ ಮೊದಲ ಕಥೆ. ವಿಮರ್ಶಕರ ಗಮನ ಸೆಳೆದ ಮತ್ತೊಂದು ಮಹತ್ವದ ಕಥೆ ‘ರೊಟ್ಟಿ’.
‘ಬಿಚ್ಚು’, ‘ತಲೆಮಾರು’, ಲಂಕೇಶರ ಕವನ ಸಂಕಲನಗಳು, ಗದ್ಯದ ವಿಚಿತ್ರ ಸೊಗಸನ್ನು ಪದ್ಯಗಳಿಗೆ ತೊಡಿಸಿ ಕಾವ್ಯ ಬರೆದ ಲಂಕೇಶ್‌ರ ‘ಅವ್ವ-1’, ‘ಅವ್ವ-2’, ‘ದೇಶಭಕ್ತ ಸೂಳೆಮಗನ ಗದ್ಯಗೀತೆ’ ಅತ್ಯುತ್ತಮ ಕವನಗಳು. ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನ ‘ಅಕ್ಷರ ಹೊಸಕಾವ್ಯ’ ಸಂಪಾದಿಸಿ ಪ್ರಕಟಿಸಿದ್ದರು. ಫ್ರೆಂಚ್ ಕವಿ ಬೋದಿಲೇರನ್ ಕವಿತೆ ‘ಪಾಪದ ಹೂಗಳು’ ಲಂಕೇಶ್ ಅನುವಾದಿಸಿರುವ ಮಹತ್ವದ ಸಂಕಲನ.