ಮಂಜೂಷೆ…!

ಮಂಜೂಷೆ…!
ಮಂಜೂಷೆ ಎಂದರೆ ಆಭರಣಗಳ ಪೆಟ್ಟಿಗೆ. ನಮ್ಮ ಅಜ್ಜ- ಅಜ್ಜಿ ಮುತ್ತಜ್ಜ- ಮುತ್ತಜ್ಜಿಯಿಂದ ನಮಗೆ ಬಳುವಳಿಯಾಗಿ ಬಂದ ಪ್ರತಿಯೊಂದು ವಸ್ತುಗಳಲ್ಲಿಯೂ ಒಂದೊಂದು ವಿಶೇಷತೆಯಿದೆ, ಅವು ಎಂದೆಂದಿಗೂ ನಮಗೆ ಅಮೂಲ್ಯವೇ. ಇಂಥ ವಸ್ತುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ ಅದರಲ್ಲೂ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಹಳೆಯ ವಸ್ತುಗಳ ವಿನ್ಯಾಸ, ಗುಣಮಟ್ಟ ಉತ್ತಮವಾಗಿರುತ್ತದೆ. ಇಂಥ ವಸ್ತುಗಳನ್ನು ಈಗ ಯ್ಯಾಂಟಿಕ್ ವಸ್ತುಗಳೆಂದು ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಹೆಚ್ಚು ವರ್ಷಗಳಾಗಿರುವ ಯ್ಯಾಂಟಿಕ್ ವಸ್ತುಗಳನ್ನು ಮನೆಯಲ್ಲಿರಿಸಿಕೊಳ್ಳುವುದು ಈಗ ಪ್ರತಿಷ್ಠೆಯ ಸಂಕೇತ. ಇವು ಮನೆಗಳಿಗೆ ಸಾಂಪ್ರದಾಯಿಕ ನೋಟವನ್ನು ನೀಡುತ್ತವೆ. ಚಿತ್ರದಲ್ಲಿ ಕಾಣುವ ಸಂದೂಕ (ಪೆಟ್ಟಿಗೆ) ಗತ ಕಾಲದಲ್ಲಿ ಆಭರಣ ಹಾಗೂ ಬೆಳ್ಳಿ ರೂಪಾಯಿ ಇಡಲು ಬಳಕೆಯಾಗುತ್ತಿದ್ದ ಒಂದು ಬಗೆಯ ವಿಶಿಷ್ಟವಾದ ಡಬ್ಬ ಹಿತ್ತಾಳೆಯಿಂದ ಮತ್ತೊಂದೆಡೆಗೆ ಒಯ್ಯಲು ಸುಲಭವಾಗುವಂಥ ಹಿಡಿಕೆಯ ವ್ಯವಸ್ಥೆಯೂ ಇದೆ. ಕಾಲ ಕಳೆದಂತೆ ಎಲ್ಲವೂ ಬದಲಾಯಿತು. ಆಧುನಿಕ ಕಾಲಘಟ್ಟದಲ್ಲಿ ಅತ್ಯಂತ ಸುರಕ್ಷಿತವಾದ ಲಾಕರ್ (ಭದ್ರ, ಕಪಾಟು) ಸೌಲಭ್ಯಗಳ ಆವಿಷ್ಕಾರವಾದಂತೆ ಮಂಜೂಷೆಯಂತಹ ಪರಿಕರಗಳು ನೇಪಥ್ಯಕ್ಕೆ ಸರಿದವು. ಪುರಾತನ ಕಾಳದ ವಸ್ತು ಸಾಮಗ್ರಿಗಳು ಅಂದಿನ ಕಾಲದ ಜೀವನಶೈಲಿಯನ್ನು ಪರಿಚಯಿಸುತ್ತವೆ. ಈ ಕಾಲದ ಮಕ್ಕಳಿಗೆ ಪರಿಚಯಿಸಲೂ ಇವುಗಳನ್ನು ಸಂಗ್ರಹಿಸಿ ಜೋಪಾನವಾಗಿಡುವುದು ನಮ್ಮ ಕರ್ತವ್ಯವಾಗಿದೆ.
ಹೊಸ್ಮನೆ ಮುತ್ತು

Leave a Reply