ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.