• -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to cart
  • -40%

    ಅರ್ಧ ಡಜನ್ ಫೀಲಿಂಗ್ಸ್

    0

    ”ಅರ್ಧ ಡಜನ್ ಫೀಲಿಂಗ್ಸ್” ಇಲ್ಲಿ ಆರು ಭಾಗಗಳಾಗಿ ರೂಪುಗೊಂಡಿದೆ. ಕೆಲವು ಸಣ್ಣ ಕಥೆಯಂತೆಯೂ, ಇನ್ನೂ ಕೆಲವು ಘಟನೆಗಳಂತೆಯೂ, ನಮ್ಮನ್ನು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ.

    Original price was: $0.72.Current price is: $0.43.
    Add to cart
  • ಪ್ರಾಫಿಟ್ ಪ್ಲಸ್ – ಜನವರಿ 2021

    0

    ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ- ಜನವರಿ 2021
    ಭರವಸೆಯ ಬದುಕಿಗಾಗಿ

    ಕನ್ನಡದ ಮೊಟ್ಟ ಮೊದಲ ಆಡಿಯೋ ಪತ್ರಿಕೆ

    $0.48
    Add to cart
  • -40%

    ಕಾಲಚಕ್ರ

    0
    Original price was: $1.20.Current price is: $0.72.
    Add to cart
  • -40%

    ನಮ್ಮ ಮನೆಯ ಬೆಳಕು

    0

    ಯಾವ ಸ್ಕೂಲು, ಕಾಲೇಜುಗಳಲ್ಲಿಯೂ ಬೋಧಿಸದಂತಹ ಸಂಸ್ಕೃತಿ, ಸಂಸ್ಕಾರವನ್ನು ಅದು ಹೇಗೆ ಮೈಗೂಡಿಸಿಕೊಂಡು ನನ್ನವಳು ಬೆಳೆದಳೋ! ಬಹುಶಃ ಅವಳ ವಂಶಸ್ಥರಿಂದ ಹರಿದು ಬಂದಿರುವ ಸಂಸ್ಕಾರದ ಫಲ. ಮದುವೆಯಾಗಿ ಬಂದಂದಿನಿಂದಲೂ ತನ್ನ ಸಂಸಾರ, ತಂದೆ ತಾಯಿಗಳು (ಅಂದರೆ ನನ್ನ ತಂದೆ ತಾಯಿಗಳು) ಮಕ್ಕಳು, ಮೊಮ್ಮಕ್ಕಳಂತೆ ಇತರರ ಬಗ್ಗೆಯೂ ಇದೇ ಕಾಳಜಿ ತೋರುತ್ತಾ ಬಂದ ನನ್ನವಳಿಗೆ ನಮ್ಮ ಕುಟುಂಬದಿಂದ ದೊರೆತದ್ದಕ್ಕಿಂತ ತೆತ್ತುಕೊಂಡದ್ದೆ ಜಾಸ್ತಿ.
    ಇದೊಂದು ಋಣ ಸಂದಾಯ ಮಾರ್ಗದ ಪ್ರತಿಫಲನದ ಫಲ ಈ ಪುಸ್ತಕವೇ ಹೊರತು ಪ್ರಸಿದ್ಧಿಗಾಗಿ ಬರೆದ ಕೃತಿಯಲ್ಲ.

    Original price was: $2.46.Current price is: $1.48.
    Add to cart
  • -40%

    ಧರ್ಮಚಾವಡಿ

    0

    ‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ.

    Original price was: $1.80.Current price is: $1.08.
    Add to cart
  • -20%

    ಶ್ರೀರುದ್ರಸಾಧನೆ

    0

    ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.

    Original price was: $1.68.Current price is: $1.34.
    Add to cart
  • ಸಂಧ್ಯಾ ರಾಗ

    0

    ಅ.ನ.ಕೃ ಅವರ ಸಂಧ್ಯಾ ರಾಗ ಕಾದಂಬರಿಯ ಧ್ವನಿ ಮುದ್ರಿಕೆ.

    Duration: 4 hours

    $1.79
    Add to cart
  • ಸ್ವಪ್ನ ಸಾರಸ್ವತ

    0

    ಗೋಪಾಲ ಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ ಪುಸ್ತಕದ ಧ್ವನಿ ಮುದ್ರಿಕೆ.

    ‘ಸ್ವಪ್ನ ಸಾರಸ್ವತ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಇದನ್ನು ತಮಿಳು, ಕೊಂಕಣಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.

    Duration: 3 hours, 53 mins

    $3.00
    Add to cart
  • -20%

    ಮಹಾಸಮಷ್ಟಿಭಾವ

    0

    ಮಹಾಸಮಷ್ಟಿಭಾವದ ಈ ಭಾವಕೃತಿ ಗ್ರಂಥಗಳನ್ನೇ ಆಧರಿಸಿ ರಚಿತವಾಗಿರುವಂಥದಲ್ಲ. ಸ್ವಾಧ್ಯಾಯದಲ್ಲಿ ಮೊದಲು ಕಂಡ ಮಹಾಸಮಷ್ಟಿಭಾವ ವಿಚಾರವು ಮುಂದೆ ಹಲರೊಂದಿಗೆ ನಡೆಸಿರುವ ಸತ್ಸಂಗದ ಮಾತುಕತೆಗಳು; ಎಂದೋ ಎಲ್ಲಿಯೋ ಕೇಳಿದ ಘಟನೆಗಳು, ಲೋಕಯಾತ್ರೆಯಲ್ಲಿ ದರ್ಶಿಸಿರುವ ಕ್ಷೇತ್ರಗಳ ದರ್ಶನಾನುಭವ ಮೊದಲಾಗಿ ಶ್ರೀಗುರುಕರುಣೆಯಿಂದ ಸಾಗುತ್ತಿರುವ ಅಂತರಂಗದ ಅಧ್ಯಾತ್ಮ ಸಾಧನೆಯೊಂದಿಗೆ ‘ಮಹಾಸಮಷ್ಟಿಭಾವ’ವು ವಿಸ್ತಾರಗೊಂಡಿದೆ; ಭಾವಸ್ಪಂದದ ಈ ವಿಸ್ತಾರಕ್ಕೆ ಬಹಿರ್ಲೋಕದ ಸ್ಪಂದಶಕ್ತಿಯೂ ಕೂಡಿ ಈ ಭಾವಕೃತಿ ಸಿದ್ಧಗೊಂಡಿದೆ.

    Original price was: $1.92.Current price is: $1.54.
    Add to cart
  • -40%

    ಶುಭವಾಗುತೈತಮ್ಮೋ…

    0

    ಶುಭವಾಗುತೈತಮ್ಮೋ..
    (ಡಾ. ದೊಡ್ಡರಂಗೇಗೌಡರವರ ಸಿನಿಮಾ ಹಾಡುಗಳು ಮತ್ತು ಹಾಡುಗಳು ಹುಟ್ಟಿದ ಕತೆ)

    Original price was: $1.92.Current price is: $1.15.
    Add to cart
  • -20%

    ಹಸಿರು ಹಚ್ಚಿ ಚುಚ್ಚಿ

    0

    ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು.
    ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ
    ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ
    ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು.

    Original price was: $1.80.Current price is: $1.44.
    Add to cart