ಮಾರ್ಕ್ಸ್ ನ ಧಾರ್ಮಿಕ ಚಿಂತನೆಗೆ ಬುದ್ಧನ ತತ್ವ ಹಾಗೂ ಮಧ್ಯಯುಗದ ಸಂತರ ಕಾವ್ಯದ ಹಿನ್ನೆಲೆಯ ಅವಶ್ಯಕತೆ ಇತ್ತು. ೨೧ನೆಯ ಶತಮಾನದ ಧಾರ್ಮಿಕ ಮೂಲಭೂತವಾದಿಯು ಅಹಂಕಾರ, ಸ್ವಾರ್ಥ, ಅಧಿಕಾರ, ಸಂಪತ್ತು, ಖ್ಯಾತಿಯ ಬೆನ್ನು ಹತ್ತಿ ದ್ವೇಷ ಮತ್ಸರದಿಂದ ಕಣ್ಣಿದ್ದೂ ಕುರುಡನಾದ. ಇಂದು ಅವನು ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮವೆಂಬ ಅಮಲಿನ ಪೇಯವನ್ನು ಅತನಿಗೆ ನೀಡಿದ್ದು ಅವನು ಹೃದಯಹೀನ ಕಠೋರ ವ್ಯಕ್ತಿತ್ವ ಬೆಳೆಸಿಕೊಂಡ. ಧರ್ಮವು ಯಾವಾಗ ಮತ್ತು ಏಕೆ ಮನುಷ್ಯನಿಗೆ ಅಗತ್ಯ ಎನ್ನುವುದರ ಚರ್ಚೆಯೇ ಧರ್ಮ ಚಿಕಿತ್ಸೆ.