ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಾಧ್ಯಮಗಳ ಸಮಸ್ಯೆ, ಇಂಗ್ಲಿಷ್ ಭಾಷೆಯ ಪ್ರಭುತ್ವದ ಸಮಸ್ಯೆ, ಆಡಳಿತದಲ್ಲಿ ಕನ್ನಡ ಬಳಕೆಯಾಗಲೇಬೇಕಾದ ಅಗತ್ಯ, ಹಿಂದೀ ಹೇರಿಕೆಯ ಪ್ರಯತ್ನಗಳು, ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳು, ಸರಕಾರೀ ಶಾಲೆಗಳ ಸಬಲೀಕರಣ, ಗಡಿಭಾಗದ ಭಾಷಾ ಸಮಸ್ಯೆಗಳು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗಳ ಸ್ಥಾನ-ಮಾನ, ಜಾನಪದ ಪದಕೋಶದ ಅಗತ್ಯ, ಕನ್ನಡ ಅಸ್ಮಿತೆಯ ನೆಲೆಗಳು, ಕನ್ನಡದ ಭವಿಷ್ಯ-ಹೀಗೆ ಅನೇಕ ವಿಷಯಗಳ ಕುರಿತು ಈ ಪುಟ್ಟ ಪುಸ್ತಕ ಬೆಳಕು ಚೆಲ್ಲುತ್ತದೆ.