‘ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ’ ಮತ್ತು ‘ಸಾಗರ್ ತಟ್ ಕೇ ಶಹರ್’ -ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಸುತ್ತಮುತ್ತಲಿನ ಪರಿಸರ -ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ-ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ.ಜೆ.ಎಸ್.ಕುಸುಮಗೀತ.