ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ! ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ.