ಅವಲಮೂರ್ತಿಯವರ ಈ ಕನಸುಗಳು ಬೀಳುವುದೇಕೆ ಕೃತಿಯು ಮಕ್ಕಳ ಜೊತೆ ದೊಡ್ಡವರಿಗೂ ಕುತೂಹಲಕಾರಿಯಾಗಿದೆ. ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಹಾಗೂ ತಮ್ಮನ್ನು ಹೊಸ ಅವಿಷ್ಕಾರಗಳಿಗೆ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಇಂತಹ ಕೃತಿಗಳು ಪ್ರೇರಣೆಯಾಗುತ್ತವೆ.
₹55.00Original price was: ₹55.00.₹50.00Current price is: ₹50.00.
ಈ ಕೃತಿಯು ಸೌರಮಂಡಲದ ಗ್ರಹಗಳಲ್ಲಿ ಒಂದಾದ ಶನಿಗ್ರಹದ ಕುರಿತಾಗಿದೆ. ಶನಿಗ್ರಹ ಎಲ್ಲ ಗ್ರಹಗಳಂತೆ ಏಕಿಲ್ಲ? ಅದು ಏಕೆ ತನ್ನ ಸುತ್ತ ಉಂಗುರ ಆಕಾರದ ರಚನೆಯನ್ನು ಹೊಂದಿದೆ? ಅದರ ವಿಶೇಷತೆ ಏನು? ಎಂಬುದರ ಕುರಿತಾಗಿ ಮಕ್ಕಳ ಕುತೂಹಲವನ್ನು ತಣಿಸುವ ಕೃತಿಯು ಇದಾಗಿದೆ.
₹55.00Original price was: ₹55.00.₹50.00Current price is: ₹50.00.
‘ಸೃಷ್ಟಿವಿಜ್ಞಾನ’ದಲ್ಲಿ ಮಹಾಸ್ಫೋಟ, ಅಗೋಚರ ಚೈತನ್ಯ, ಕ್ವೇಸಾರ್ ಗಳ ಬಗ್ಗೆ ‘ತಾರಾಲೋಕ’ದಲ್ಲಿ ಸಾಧಾರಣ ನಕ್ಷತ್ರಗಳು (ಉದಾ: ಸೂರ್ಯ), ಶ್ವೇತಕುಬ್ಜ, ಕಪ್ಪುರಂಧ್ರ, ಸೂಪರ್ನೋವಾ, ಪಲ್ಸಾರ್ ಇತ್ಯಾದಿಗಳ ಬಗ್ಗೆ ಮತ್ತು ‘ವೀಕ್ಷಣಾ ಪ್ರಪಂಚ’ದಲ್ಲಿ ಮಂಗಳ ಗ್ರಹ, ಹಬಲ್ ದೂರದರ್ಶಕ, ಧೂಮಕೇತು, ಕುಬ್ಜಗ್ರಹಗಳು ಇತ್ಯಾದಿಗಳ ಬಗ್ಗೆ ಲೇಖನಗಳಿವೆ.
₹150.00Original price was: ₹150.00.₹135.00Current price is: ₹135.00.
ಪ್ರಭುತ್ವದ ಸಂವಿಧಾನ ಇದ್ದೂ ಇಲ್ಲದಂತಾಗಿದ್ದು ಜಾತಿ ಭೂತದ ಬಿಗಿ ಸರಪಳಿ ಸಾಮಾಜಿಕವಾಗಿ ಎಲ್ಲರನ್ನೂ ಕಟ್ಟಿಹಾಕಿದೆ. ಯಾವುದೇ ಉತ್ತಮ ವ್ಯವಸ್ಥೆ ತರಲೆತ್ನಿಸಿದರೂ ಅದು ಜಾಗತಿಕ ಬಂಡವಾಳಶಾಹಿಯ ಕಣ್ಣಳತೆಯಲ್ಲೇ ಇದ್ದು ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಯೇ ಅದಕ್ಕೆ ಅಂಕಿತ ಬೀಳುತ್ತದೆ. ನಮ್ಮಲ್ಲಿ ರಾಜಕೀಯ ಧುರೀಣರಿರುವಂತೆ ಧಾರ್ಮಿಕ-ಸಾಂಸ್ಕೃತಿಕ ಧುರೀಣರಿದ್ದು ರಾಜಕೀಯ ವ್ಯವಸ್ಥೆಯನ್ನು ನಾಜೂಕಾಗಿ ನಿಯಂತ್ರಿಸುತ್ತಾರೆ. ಇನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರ ಉದ್ಧಾರ ಹೇಗೆ ಸಾಧ್ಯ?-ಹೀಗೆ ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಸಂಶೋಧಿಸಿದ ಕೃತಿ ಇದು.
₹100.00Original price was: ₹100.00.₹90.00Current price is: ₹90.00.
ಸಮಾನತೆಯ ಜಾಗದಲ್ಲಿ ಅಸಮಾನತೆ ಸ್ಥಾಪಿತವಾಗುವುದು ಎಲ್ಲ ಬುಡಕಟ್ಟುಗಳ ವಿಘಟನೆಯ ಸಂದರ್ಭದಲ್ಲೂ ಉಂಟು. ಆರ್ಥಿಕ ಅಸಮಾನತೆಯಿಂದ ರೂಢಿಗೆ ಬರುವ ಸಾಮಾಜಿಕ ಅಸಮಾನತೆಯ ಘೋರ ಪರಿಣಾಮ ಎಲ್ಲ ದೇಶಗಳಲ್ಲೂ ಕಂಡುಬಂದಿದೆ. ಉದಾಹರಣೆಗೆ, ಪ್ರಾಚೀನ ಗ್ರೀಸ್ ಮತ್ತು ರೋಮ್ ಇತಿಹಾಸದಲ್ಲಿ ಗುಲಾಮಿ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಗುಲಾಮರನ್ನು ಆ ಸಮಾಜಗಳು ಅಸ್ಪೃಶ್ಯರೆಂದು ಪರಿಗಣಿಸಲಿಲ್ಲ. ನಮ್ಮ ದೇಶದ ಕ್ರೌರ್ಯವು ಸಮಾಜದ ಒಂದು ವಿಭಾಗವನ್ನು ಕೇವಲ ಭೀಕರ ಶೋಷಣೆಗೆ ಗುರಿಮಾಡಲಿಲ್ಲ. ಆ ವಿಭಾಗವನ್ನು ಅಮಾನುಷವಾಗಿ ಹಿಂಸಿಸಿತು ಮತ್ತು ದೈಹಿಕವಾಗಿ ಸ್ಪೃಶ್ಯರನ್ನಾಗಿಸಿತು. ಇಂತಹ ಸಾಮಾಜಿಕ ಪಿಡುಗೊಂದು ಯಾವ ದೇಶದಲ್ಲೂ ಮೂರು ಸಾವಿರ ವರ್ಷಗಳ ಕಾಲ ನಿರಂತರವಾಗಿ ಬಾಧೆಯುಂಟುಮಾಡಿರುವ ದೃಷ್ಟಾಂತವಿಲ್ಲ. ಅದು ನಮ್ಮ ದೇಶದ ಅಸಹ್ಯ ಅನನ್ಯತೆಯಾಗಿ ಉಳಿದಿದೆ. ಮಾನಸಿಕವಾಗಿ ಇಡೀ ಸಮಾಜವು ಅಂತಹ ದೌರ್ಜನ್ಯವನ್ನು ಸಾರಾಸಗಟಾಗಿ ಸ್ವೀಕರಿಸಿದ್ದಿರಲಾರದು.
-ಡಾ||ಜಿ.ರಾಮಕೃಷ್ಣ
₹225.00Original price was: ₹225.00.₹203.00Current price is: ₹203.00.
ವ್ಯಕ್ತಿಗಳಲ್ಲಿನ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ-ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ-ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ ಅತ್ಮವಿಶ್ವಾಸ ಕುಂದತೊಡಗಿ ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅನೇಕ ಸಾಮಾಜಿಕ-ವೈಯಕ್ತಿಕ ಕಾರಣಗಳಿಂದ ಗುರಿಮುಟ್ಟಲಾಗದೆ ಚಡಪಡಿಸುತ್ತ ಕೀಳರಿಮೆಯಿಂದ ಬಳಲುತ್ತಾನೆ.
₹40.00Original price was: ₹40.00.₹36.00Current price is: ₹36.00.