ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ –
ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು, ಜೆ. ಎನ್. ಬರ್ನ್ ಸ್ಟಿನ್ ಎಂಬುವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದನ್ನು ಶ್ರೀನಿವಾಸ ವೈದ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀನಿವಾಸ ವೈದ್ಯರು ‘ಇದು ನನ್ನ ಮೊದಲ ಅನುವಾದ’ ಎಂದಿದ್ದಾರೆ. ಇಡೀ ಕಥೆಯಲ್ಲಿ ಹುಂಜ, ಮತ್ತೆ ಮತ್ತೆ ಪ್ರಸ್ತಾಪಗೊಳ್ಳುವ ಬಾರದ ಪತ್ರ,ಕರ್ನಲ್ ನ ಮತ್ತು ಇತರರ ಆರೋಗ್ಯ, ಅನಾರೋಗ್ಯ ಇವೆಲ್ಲ ಕವಿತೆಯೊಂದರ ಸಂಕೇತ, ಪ್ರತಿಮೆಗಳಂತೆ ಬಳಕೆಯಾಗಿವೆ. ಹೆಸರಿಲ್ಲದ ಊರಿನ ಹೆಸರಿಲ್ಲದ ನಾಯಕನ ಕಥೆ ಲ್ಯಾಟಿನ್ ಅಮೆರಿಕದ, ಅದನ್ನೂ ಮೀರಿ ಅಸಮಾನ ಮನುಷ್ಯ ಸಮಾಜದ, ಅದನ್ನೂ ಮೀರಿ ಮನುಷ್ಯ ಸಾಮಾನ್ಯನ ಬದುಕಿನ ಕಥೆಯಾಗುವಂತೆ ಹೇಗೆಲ್ಲ ಹಬ್ಬುತ್ತದೆ, ಅನುಭವವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ