• ಕಾವ್ಯಸಿಂಧು

    0

    ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.

    $0.00
    Add to cart
  • -40%

    ದಿನಚರಿಯ ಕಡೇ ಪುಟದಿಂದ…

    0

    ದಿನಚರಿಯ ಕಡೇ ಪುಟದಿಂದ…
    ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.

    Original price was: $1.32.Current price is: $0.79.
    Add to cart
  • -40%

    ಶ್ರೀನಿವಾಸ ಕಲ್ಯಾಣ

    0

    ಶ್ರೀನಿವಾಸ ಕಲ್ಯಾಣ –

    ತಿರುಪತಿಯ ವೆಂಕಟಪ್ಪನ ಒಕ್ಕಲಿನವರಿಗೆ ಪ್ರತಿ ನವರಾತ್ರಿಯಲ್ಲಿ ‘ಶ್ರೀನಿವಾಸ ಕಲ್ಯಾಣ’ ಓದುವುದು, ಕೇಳುವುದು ಒಂದು ನಿಯಮ. ಪುರೋಹಿತರು ಬಂದು ಪುರಾಣವನ್ನು ಹೇಳುತ್ತಿದ್ದರು. ನೌಕರಿಗೆಂದು ನಗರಗಳಿಗೆ ವಲಸೆ ಬಂದ ನಂತರ ಪುರೋಹಿತರ ಕೆಲಸವನ್ನು ಯಜಮಾನನೇ ಮಾಡಬೇಕಾಯಿತು. ಅಂಥ ಸಂದರ್ಭದಲ್ಲಿ, ಸಮಯಕ್ಕೆ ಅನುಕೂಲವಾಗುವಂತೆ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿಯ ಪ್ರಯತ್ನದ ಫಲ ಈ ‘ಶ್ರೀನಿವಾಸ ಕಲ್ಯಾಣ’ ಕಿರು ಪುಸ್ತಿಕೆ.

    Original price was: $0.60.Current price is: $0.36.
    Add to cart
  • -40%

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು

    0

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು
    (ಮಕ್ಕಳ ಕತೆಗಳು)
    ವೈದೇಹಿಯವರು ಮಕ್ಕಳನ್ನು ಎದುರಿಗೆ ಕುಡ್ರಿಸಿಕೊಂಡು ಹೇಳಿದಂತಿರುವ  ಈ ಕಥೆಗಳು ಆಕರ್ಷಕ ಶೈಲಿ ನಾಟಕೀಯ ನಿರೂಪಣೆಗಳ ಮೂಲಕ ಮಕ್ಕಳ ಕಥೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.  ಈ ಕಥೆಗಳು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಂತೋಷ ನೀಡುತ್ತವೆ.  ನಿರಸವಾದ ನೀತಿ ಕಥೆಗಳಿಂದ ತುಂಬಿರುವ ಕನ್ನಡದ ಮಕ್ಕಳ ಕಥೆಗಳಿಗಿಂತ ಇವು ವಿಭಿನ್ನವಾಗಿವೆ.

    Original price was: $0.84.Current price is: $0.50.
    Add to cart
  • -40%

    ತುಘಲಕ್

    0

    ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ.

    Original price was: $1.20.Current price is: $0.72.
    Add to cart
  • ಎಲ್ಲಿಯೂ ಸಲ್ಲಲಿಲ್ಲ

    0

    ಎಲ್ಲಿಯೂ ಸಲ್ಲಲಿಲ್ಲ
    ಈ ನಾಟಕವು ನರಸಿಂಹ ಹಿರಣ್ಯಕಶಿಪು, ದೇವತೆಗಳು, ಇವರಾರದೂ ಪೌರಾಣಗಳ ಕತೆಯಲ್ಲ. ಆದ್ದರಿಂದ ನಡೆಯುವ ಪ್ರಸಂಗಗಳಿಗೆ ಪೌರಾಣಗಳ ದೃಷ್ಟಿಯಿಂದ ಲಾಜಿಕ್ ಇರುವುದಿಲ್ಲ. ದೇವಲೋಕ ಅಂಥದೊಂದಿದ್ದರೆ ಮತ್ತು ಮನುಷ್ಯಲೋಕ ಇವುಗಳ ನಡುವಿನ ಕೊಂಡು ಕಳಚಿದವೆನಿಸಿದಾಗ ನಾಟಕ ನಡೆಯುವದು. ದೇವತೆಗಳು, ನಾಟಕ ಆಡೂವವಳು, ಅದರ ಹೊರಗಿನವರು ಹೀಗೆ ಮೂಲಸ್ತರಗಳಲ್ಲಿ ಪ್ರಹಸನ ನಡೆಯುತ್ತದೆ. ಇದು ನಾಟಕದ ವಸ್ತು. ಪೂರ್ಣ ನಾಟಕ ನಡೆದಾಗ ಏನೇನಾಗುವದೋ ಅದೇ ನಾಟಕದ ಕತೆ.

    $0.00
    Add to cart